ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯೂ ಹರಿಯಾಣ ಮುಗಿಸಿ ಶನಿವಾರ ದೆಹಲಿ ಪ್ರವೇಶಿಸಿದ್ದು ಯಾತ್ರೆಗೆ ಅದ್ದೂರಿ ಸ್ವಾಗತ ದೊರೆತಿದೆ.
ಇನ್ನು ಯಾತ್ರೆ ದೆಹಲಿ ಪ್ರವೇಶಿಸುತ್ತಿದ್ದಂತೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.

ಈ ಬಗ್ಗೆ ದೆಹಲಿ ಸಂಚಾರಿ ಪೊಲೀಸರು ಶುಕ್ರವಾರ ಯಾತ್ರೆ ಸಾಗುವ ಮಾರ್ಗ ಬೀಟ್ಟು ಬದಲಿ ಮಾರ್ಗವನ್ನ ಉಪಯೋಗಿಸುವಂತೆ ಸಾರ್ವಜನಿಕರಿಗೆ ಮುನ್ಸೂಚನೆಯನ್ನ ನೀಡಿದ್ದರು ಸಹ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು ಕಂಡು ಬಂದಿದೆ. ಬದರ್‌ಪುರ್‌ನಿಂದ ಕೆಂಪುಕೋಟೆವರೆಗೂ ತೀವ್ರ ಸಂಚಾರ ದಟ್ಡಣೆ ಇರಲಿದ್ದು ಈ ಮಾರ್ಗವನ್ನ ಉಪಯೋಗಿಸದಂತೆ ಪೊಲೀಸರು ವಿನಂತಿಸಿದ್ದಾರೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯೂ ಒಟ್ಟು 108 ದಿನಗಳನ್ನು ಪೂರೈಸಿದ್ದು ಪ ರಾಜ್ಯಗಳ 46 ಜಿಲ್ಲೆಗಳಿಂದ ಒಟ್ಟು 3,000 ಕಿಲೋಮೀಟರ್ ಕ್ರಮಿಸಿದೆ.





