• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಸುನೀಲ್ ಕುಮಾರ್.ಬಿ.ಆರ್ ಸಾರಥ್ಯದ ಟಿಪಿಎಲ್ ಸೀಸನ್ -2 ಟ್ರೋಫಿ, ಜೆರ್ಸಿ ಅನಾವರಣ

ಪ್ರತಿಧ್ವನಿ by ಪ್ರತಿಧ್ವನಿ
March 8, 2023
in ಕ್ರೀಡೆ
0
ಸುನೀಲ್ ಕುಮಾರ್.ಬಿ.ಆರ್ ಸಾರಥ್ಯದ ಟಿಪಿಎಲ್ ಸೀಸನ್ -2 ಟ್ರೋಫಿ, ಜೆರ್ಸಿ ಅನಾವರಣ
Share on WhatsAppShare on FacebookShare on Telegram

ಮಾರ್ಚ್ 12ರಿಂದ ಕಿರುತೆರೆ ತಾರೆಯರ ಕ್ರಿಕೆಟ್ ರಂಗು

ADVERTISEMENT

ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಿಸುವ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2 ಇದೇ ತಿಂಗಳು ನಡೆಯುತ್ತಿದೆ. ಈಗಾಗಲೇ ತಂಡದ ನಾಯಕರು, ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಆಯೋಜಕರು ಇದೀಗ ಸೀಸನ್ -2 ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಿದ್ದಾರೆ.

ಟಿಪಿಎಲ್ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ನಟ ವಿನೋದ್ ಪ್ರಭಾಕರ್, ರಣಜಿ ಆಟಗಾರರಾದ ಶರತ್ ಶ್ರೀನಿವಾಸ್, ಅರ್ಜುನ್ ಹೊಯ್ಸಳ, ದೇಗ ನಿಶ್ಚಲ್, ಬಿ.ಯು.ಶಿವಕುಮಾರ್, ಅನಿರುದ್ಧ್ ಜೋಶಿ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿರುವ ಮತ್ತು ರಣಜಿ ಆಟಗಾರ ಅಭಿಮನ್ಯು ಮಿಥುನ್ ಭಾಗಿಯಾಗಿ ಟಿಪಿಎಲ್ ಸೀಸನ್-2ಗೆ ಶುಭ ಹಾರೈಸಿದ್ದಾರೆ.

ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಟಿಪಿಎಲ್ ಸೀಸನ್ -2 ನಡೆಯುತ್ತಿದೆ. ಮೊದಲ ಸೀಸನ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದರಿಂದ ಸೀಸನ್ -2 ನಡೆಸಲು ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಸುನೀಲ್ ಕುಮಾರ್.ಬಿ.ಆರ್ ನಿರ್ಧರಿಸಿದ್ದು, ಈ ಬಾರಿಯೂ ಅದ್ದೂರಿಯಾಗಿ, ಕಲರ್ ಫುಲ್ ಆಗಿ ಟಿಪಿಎಲ್ ಸೀಸನ್ -2 ನಡೆಯಲಿದೆ.

ಟಿಪಿಎಲ್ ಸೀಸನ್ -2 ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ  ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.

Tags: ಎನ್ 1 ಕ್ರಿಕೆಟ್ ಅಕಾಡೆಮಿಟಿಪಿಎಲ್ ಸೀಸನ್ -2 ಟ್ರೋಫಿಸುನೀಲ್ ಕುಮಾರ್.ಬಿ.ಆರ್
Previous Post

ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

Next Post

ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್​ ಸಿಗಲೂಬಹುದು : ಉಲ್ಟಾ ಹೊಡೆದ ಯಡಿಯೂರಪ್ಪ

Related Posts

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!
ಕ್ರೀಡೆ

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!

by ಪ್ರತಿಧ್ವನಿ
May 27, 2026
0

ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿ ಬಿ( Royal Challengers Bengaluru) ಬ್ಯಾಟರ್‌ಗಳು ಧರ್ಮಶಾಲಾ ಮೈದಾನದಲ್ಲಿ ರನ್ ಮಳೆ ಸುರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೌಂಡರಿ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

May 25, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

May 21, 2026
Next Post
ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಎಷ್ಟು ಹಣ ಮಾಡಿದ್ದಾರೆ ಎಂದು ಉತ್ತರಿಸಲಿ : ಬಿಎಸ್​ವೈ ಗುಡುಗು

ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್​ ಸಿಗಲೂಬಹುದು : ಉಲ್ಟಾ ಹೊಡೆದ ಯಡಿಯೂರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada