ರಾಕಿಂಗ್ ಸ್ಟಾರ್ ಯಶ್ (Rocking star Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಚಿತ್ರ ತಂಡದಿಂದ ಇದೀಗ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಸಧ್ಯದರಲ್ಲೇ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡೋದಕ್ಕೆ ರಾಕಿ ಭಾಯ್ (Rocky) ರೆಡಿ ಆಗಿದ್ದಾರೆ. ಯಶ ಅವರ ಹುಟ್ಟುಹಬ್ಬದಂದು ಜನವರಿ 8ಕ್ಕೆ ಟಾಕ್ಸಿಕ್ ಸಿನಿಮಾ ಫಸ್ಟ್ ಲುಕ್ ಹೊರ ಬೀಳಲಿದೆ.

ಕಳೆದ ವರ್ಷದ ಹುಟ್ಟುಹಬ್ಬದ ವೇಳೆ ಸಿಬೆಮಾಡ ಯಾವುದೇ ಅಪ್ಡೇಟ್ ಸಿಗದೇ ಅಭಿಮಾನಿಗಳು ನಿರಾಶೆ ಹೊಂದಿದ್ದರು. ಆದ್ರೆ ಈ ಬಾರಿ ಅಭಿಮಾನಿಗಳಿಗೆ ಯಶ್ ನಿರಾಸೆಯಾಗಲು ಬಿಟ್ಟಿಲ್ಲ. ಹೀಗಾಗಿ ಈ ಬಗೆ ಸ್ವತಃ ಯಶ್ (Yash) ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ರಿಲೀಸ್ ಆಗಿರೋ ನ್ಯೂ ಪೋಸ್ಟರ್ ಸೂಪರ್ ಆಗಿದೆ.

ಇದೆ ಜನವರಿ 8 ನಟ ಯಶ್ ಬರ್ತ್ ಡೇ ಇದ. ಅದೇ ದಿನ ಬೆಳಗ್ಗೆ 10.25 ಕ್ಕೆ ಸರಿಯಾಗಿ ಚಿತ್ರದ ಮೇಜರ್ ಅಪ್ಡೇಟ್ ಹೊರಬೀಳಲಿದೆ. ಬಿಡುಗಡೆಯಾಗೋದು ಪೋಸ್ಟರ್ ಇರಬಹುದ ಅಥವಾ ವಿಡಿಯೋನಾ , ಅಥವಾ ಮೋಷನ್ ಪೋಸ್ಟರ್ ಅಷ್ಟಕ್ಕೆ ಸೀಮಿತವಾಗಬಹುದಾ ಅನ್ನೋದೇ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡ್ತಿದ್ದಾರೆ. ನಾಯಕಿಯರಾಗಿ ಕಿಯಾರಾ ಆಡ್ವಾಣಿ , ನಯನತಾರ ಪ್ರಮುಖ ಪಾತ್ರದಲ್ಲಿದ್ದಾರೆ. ಈ ವರ್ಷದ ಅಂತ್ಯ ಡಿಸೆಂಬರ್ ಗೆ ಸಿನಿಮಾ ರಿಲೀಸ್ ಆಗಲಿದೆ .