ಬೆಂಗಳೂರು ನಗರದಲ್ಲಿನ ಬಹುತೇಕ ಎಲ್ಲಾ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ನಾಗರಿಕ ಸಂಸ್ಥೆ ಹೇಳಿಕೊಂಡ ನಂತರ ಕರ್ನಾಟಕ ಹೈಕೋರ್ಟ್ ಗುರುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಸ್ತೆಗುಂಡಿಗಳ ಸ್ಥಿತಿ ವರದಿಯನ್ನು ‘ಟೋಟಲ್ ಶೇಮ್ʼ ಎಂದು ನ್ಯಾಯಾಲಯ ಚೀಮಾರಿಯಾಕಿದ್ದು, ಫೆಬ್ರವರಿ 7ರಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ಗೆ ಕೊರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ರಸ್ತೆ ಗುಂಡಿಗಳ ಬಗ್ಗೆ ಕುರಿತು ಸಲ್ಲಿಸಿದ ನಾಗರಿಕ ಸಂಸ್ಥೆಯ ಪರ ವಾದ ಮಂಡಿಸಿದ ವಕೀಲರಿಗೆ ಪ್ರಶ್ನೆಗಳ ಸುರಿಮಳೆಗೈದಿತು. “ನೀವು ಬೆಂಗಳೂರಿನಲ್ಲಿ ನೆಲೆಸಿದ್ದೀರಾ? ಪ್ರತಿ ಮಳೆಯ ನಂತರ ಗುಂಡಿಗಳು ಏಕೆ ಉಂಟಾಗುತ್ತವೆ? ಈ ರಸ್ತೆಗಳನ್ನು ಬಳಸುವವರಿಗೆ ಅದರ ಗುಣಮಟ್ಟದ ಬಗ್ಗೆ ತಿಳಿದಿರುತ್ತದೆ” ಎಂದು ಪೀಠವು ವಕೀಲರಿಗೆ ಮೌಖಿಕವಾಗಿ ಹೇಳಿದೆ.
ಬಿಬಿಎಂಪಿ ತನ್ನ ವರದಿಯಲ್ಲಿ, 1,344 ಕಿಮೀ ಪ್ರಮುಖ ರಸ್ತೆಗಳಲ್ಲಿ, ವಲಯ ವಾರ್ಡ್ ವ್ಯಾಪ್ತಿಯಲ್ಲಿ 12,527 ಕಿಮೀ ರಸ್ತೆಗಳಲ್ಲಿ ಉದ್ದಕ್ಕೂ ಇರುವ ಎಲ್ಲಾ ಗುಂಡಿಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದೆ. ನಗರದ ಬಹುತೇಕ ರಸ್ತೆಗಳು ದುರಸ್ತಿಗೊಂಡಿವೆ ಎಂದು ಬಿಬಿಎಂಪಿ ವಕೀಲರು ತಿಳಿಸಿದರು. ಏಜೆನ್ಸಿಗಳು ಆಗಾಗ್ಗೆ ರಸ್ತೆಗಳನ್ನು ಅಗೆಯುವುದರಿಂದ ರಸ್ತೆ ಹದಗೆಡುತ್ತಿದೆ ಎಂದು ಅವರು ಹೇಳಿದರು.

“ಬಿಡಬ್ಲ್ಯುಎಸ್ಎಸ್ಬಿ, ಬೆಸ್ಕಾಂ ಮತ್ತು ಗೇಲ್ ಲಿಮಿಟೆಡ್ ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದ ನಂತರ ದುರಸ್ತಿ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡುತ್ತೀರಿ? ನೀವು ಏನಾದರೂ ದಂಡ ವಿಧಿಸಿದ್ದೀರಾ? ಎಂದು ಬಿಬಿಎಂಪಿಗೆ ಕೋರ್ಟ್ ಪ್ರಶ್ನಿಸಿದೆ ಮತ್ತು ನಾವು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
ಈಗ ಸಲ್ಲಿಕೆಯಾಗಿರುವ ವರದಿ ತೃಪ್ತಿಕೊಡುವಂತದಲ್ಲ ಎಂದು ನ್ಯಾಯಾಲಯ ಹೇಳಿದೆ. “ನಗರದ ರಸ್ತೆಗಳ ದುರಸ್ತಿಗೆ ಅಳವಡಿಸಲಾಗಿರುವ ತಂತ್ರಜ್ಞಾನದ ಬಗ್ಗೆ ಬಿಬಿಎಂಪಿ ನಮಗೆ ತಿಳಿಸಬೇಕು ಮತ್ತು ರಸ್ತೆಗಳ ನಿರ್ಮಾಣ ಮತ್ತು ದುರಸ್ತಿಗೆ ಯಾವುದೇ ಎಕ್ಸಪರ್ಟ್ ಅಥವಾ ಹೊರಗಿನ ಏಜೆನ್ಸಿಗಳನ್ನು ತೊಡಗಿಸಿಕೊಂಡಿದ್ದಾರೆಯೇ ಎಂಬುದನ್ನು ನಮಗೆ ತಿಳಿಸಬೇಕು. ಬಿಬಿಎಂಪಿ ಅಳವಡಿಸಿಕೊಂಡ ಕಾರ್ಯವಿಧಾನದ ದಾಖಲೆ ಮತ್ತು ನೀತಿಗೆ ತರಲಾಗುತ್ತದೆ. ಏಜೆನ್ಸಿಗಳು ಅಥವಾ ಸಂಸ್ಥೆಗಳಿಗೆ ರಸ್ತೆಯನ್ನು ಅಗೆಯಲು ಮತ್ತು ಅವುಗಳನ್ನು ಸಮಯಕ್ಕೆ ತಕ್ಕಂತೆ ಸರಿಪಡಿಸಲು ಅನುಮತಿ ನೀಡುವುದಕ್ಕಾಗಿ ದಾಖಲೆಯಲ್ಲಿ ಇರಿಸಬೇಕು, ”ಎಂದು ಪೀಠ ಹೇಳಿದೆ.












