ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ (Pahalgam terror attack) ನಂತರ ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತೀಯರು ಯುದ್ಧ ಸ್ಥಿತಿಗೆ ಸನ್ನದ್ಧರಾಗಬೇಕು ಎಂಬ ನಿಟ್ಟಿನಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಹೀಗಾಗಿ ಕೇಂದ್ರ ಗೃಹ ಇಲಾಖೆ ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 259 ಕಡೆಗಳಲ್ಲಿ ಸಿವಿಲ್ ಮಾಕ್ ಡ್ರಿಲ್ (Mok drill) ನಡೆಸುವಂತೆ ಸೂಚಿನೆ ನೀಡಿದೆ.ಹೀಗಾಗಿ ನಾಳೆ (ಮೇ.7) ಕರ್ನಾಟಕದ 3 ಕಡೆಗಳಲ್ಲಿ ಯುದ್ಧದ ಸೈರನ್ ಮೊಳಗಲಿದೆ.
ಹೌದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ & ಶಾಖೋತ್ಪನ್ನ ವಿದ್ಯುತ್ ಸ್ಥಾವರ ಇರುವ ರಾಯಚೂರು ಮತ್ತು ಕಾರವಾರದಲ್ಲಿ ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.

ಒಂದುವೇಳೆ ಯುದ್ಧ ಆರಂಭವಾಗಿ ಶತ್ರು ರಾಷ್ಟ್ರ ಭಾರತದ ಹಲವು ಪ್ರದೇಶಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿದರೆ, ಈ ಸಂದರ್ಭದಲ್ಲಿ ನಾಗರಿಕರ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮಹತ್ತರ ಕಾರ್ಯ ಇದಾಗಿದ್ದು, ಯುದ್ಧದ ದಿನಗಳು ಸನಿಹದಲ್ಲಿದೆ ಎಂಬಂತಿದೆ.





