ಮಂಗಳೂರು: ಟಾಲಿವುಡ್(Tollywood) ಯಂಗ್ ರೆಬೆಲ್ ಸ್ಟಾರ್ (Young Rebel Star) ಪ್ರಭಾಸ್(Prabas), ಸಾಲು ಸಾಲು ಪ್ಯಾನ್ ಇಂಡಿಯಾ(Pan India) ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ದಕ್ಷಿಣದ ಶಕ್ತಿ ದೇವತೆ ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ನಟ ಪ್ರಭಾಸ್ ಭೇಟಿ ನೀಡಿದ್ರು.

ಸಲಾರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಪ್ರಭಾಸ್ ಹೊಂಬಾಳೆ ನಿರ್ಮಾಣ ಸಂಸ್ಥೆಯ ಮಾಲೀಕ ‘ಸಲಾರ್’ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜೊತೆ ಕಟೀಲು ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ರು
ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಭಾಸ್, ದೇಗುಲದಲ್ಲಿ ಕೆಲ ಕಾಲ ಪ್ರಾರ್ಥನೆ ಸಲ್ಲಿಸಿದ್ರು. ದೇವಿಯ ಆಶೀರ್ವಾದ ಪಡೆದ ಪ್ರಭಾಸ್ಥೆ ದೇವಾಲಯದ ವತಿಯಿಂದ ದೇವಿಯ ಫೋಟೋವನ್ನು ನೀಡಿ ಗೌರವ ಸಲ್ಲಿಸಲಾಗಿದೆ

ನಿರ್ಮಾಪಕ ವಿಜಯ್ ಕಿರಗಂದೂರು ಅವರು ದುರ್ಗಾಪರಮೇಶ್ವರಿಯ ಪರಮ ಭಕ್ತರು. ಕಿರಗಂದೂರು ಅವರು ಹಲವು ಭಾರಿ ಕಟೀಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಇದೀಗ ಪ್ರಭಾಸ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದು ದೇವಿಯ ದರ್ಶನ ಪಡೆದ್ರು.
ಸಲಾರ್ ಸಿನಿಮಾ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದು, ಖುಷಿಯನ್ನು ಇತ್ತೀಚಿಗಷ್ಟೇ ಚಿತ್ರತಂಡ ಸೆಲೆಬ್ರೇಟ್ ಮಾಡಿತ್ತು. ಕೇಕ್ ಕತ್ತರಿಸಿ ಖುಷಿಯನ್ನು ಹಂಚಿಕೊಂಡಿದ್ರು. ಸಲಾರ್ ಗೆದ್ದ ಬಳಿಕ ಪ್ರಭಾಸ್ ಸಿನಿಮಾ ಮೇಲಿನ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಪ್ರಭಾಸ್ ಅಭಿನಯದ ಹೊಸ ಸಿನಿಮಾ ಕಲ್ಕಿ 2898 ಎಡಿ ಚಿತ್ರದಿಂದಲೂ ಹೊಸ ಅಪ್ಲೇಟ್ ಸಿಕ್ಕಿದೆ. ಮೇ 9ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಅದರ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ.
ಮಂಗಳೂರು ಬಳಿಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಭಾಸ್ ಭೇಟಿ ನೀಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜತೆಗೆ ಆಗಮಿಸಿದ ಪ್ರಭಾಸ್, ದೇವಿಯ ದರ್ಶನ ಪಡೆದಿದ್ದಾರೆ.