• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೆಬ್ಬಾಳದಲ್ಲಿ ಟೋಲ್‌ಮುಕ್ತ ಸುರಂಗ ರಸ್ತೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೊಸ ಅಧ್ಯಾಯ

ಪ್ರತಿಧ್ವನಿ by ಪ್ರತಿಧ್ವನಿ
June 28, 2026
in Top Story
0
ಹೆಬ್ಬಾಳದಲ್ಲಿ ಟೋಲ್‌ಮುಕ್ತ ಸುರಂಗ ರಸ್ತೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೊಸ ಅಧ್ಯಾಯ
Share on WhatsAppShare on FacebookShare on Telegram

ಬೆಂಗಳೂರು, ಜೂನ್ 28: ನಗರದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ನಿರ್ಮಿಸಲಾಗುತ್ತಿರುವ 2.5 ಕಿಲೋಮೀಟರ್ ಟೋಲ್‌ಮುಕ್ತ ಜೋಡಿ ಸುರಂಗ ರಸ್ತೆ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಅವರು, “ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಯೇ ನಮ್ಮ ಪ್ರಮುಖ ಗುರಿ. ಮುಂದಿನ 50 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳಿದರು.

ಬಿಡಿಎ ಸಂಪನ್ಮೂಲಗಳಿಂದಲೇ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ಟೋಲ್ ವಿಧಿಸಲಾಗುವುದಿಲ್ಲ ಎಂದು ತಿಳಿಸಿದರು. ಜನರ ಪ್ರಯಾಣದ ಸಮಯ ಉಳಿಸಿ, ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಸರ್ಕಾರದ ಉದ್ದೇಶ ಎಂದರು.

ಹೆಬ್ಬಾಳದಿಂದ ರೇಷ್ಮೆ ಸಂಸ್ಥೆಯವರೆಗೆ ಸುಮಾರು 17 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೂರು-ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಅಭಿವೃದ್ಧಿಗಾಗಿ ಸರ್ಕಾರ ₹1.50 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ರೂಪಿಸಿದ್ದು, ಕಸದ ನಿರ್ವಹಣೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಎಂ, “ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಜನರಿಗೆ ಉಪಯೋಗವಾಗುವ ಕೆಲಸಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಮಗೆ ದೊರೆತ ಅವಕಾಶವನ್ನು ಜನರ ಸೇವೆಗೆ ಬಳಸಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.

ಬೆಂಗಳೂರು ಆಡಳಿತದ ಮೇಲಿನ ಒತ್ತಡ ಕಡಿಮೆ ಮಾಡಲು ನಗರವನ್ನು ಐದು ಪಾಲಿಕೆಗಳಾಗಿ ವಿಭಜಿಸುವ ನಿರ್ಧಾರವನ್ನು ಎಲ್ಲರ ಸಲಹೆ ಪಡೆದೇ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ತುಂಗಭದ್ರಾ, ಮೇಕೆದಾಟು ಹಾಗೂ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗಳ ಬಗ್ಗೆಯೂ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Tags: #bengaluru#dkshivakumar#HebbalTunnel#karnataka#SmartCity#TunnelRoadBDABengaluruDevelopmentinfrastructureTraffic
Previous Post

ಕರ್ನಾಟಕದಲ್ಲಿ ಮದ್ಯದಂಗಡಿ ಆರಂಭಕ್ಕೆ ಕಟ್ಟುನಿಟ್ಟಿನ ನಿಯಮ; ಹೊಸ ಪರವಾನಗೆಗೆ ಮಾನದಂಡಗಳೇನು?

Next Post

ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

Related Posts

ಅರಾಜಕ ಸಮಾಜದ ಅನಾಗರಿಕ  ಮನಸ್ಥಿತಿಗಳು
Top Story

ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

by ಪ್ರತಿಧ್ವನಿ
June 29, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. “ ಪಾಪಾ ಮುಝೆ ಬಚಾ ಲೋ,,,,, ” (ಅಪ್ಪಾ ನನ್ನನ್ನು ಕಾಪಾಡೀ,,,,,) ಇದು ಯಾವುದೋ ಬಾಲಿವುಡ್‌ ಸಿನಿಮಾದ...

Read moreDetails
ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

June 28, 2026
ಕರ್ನಾಟಕದಲ್ಲಿ ಮದ್ಯದಂಗಡಿ ಆರಂಭಕ್ಕೆ ಕಟ್ಟುನಿಟ್ಟಿನ ನಿಯಮ; ಹೊಸ ಪರವಾನಗೆಗೆ ಮಾನದಂಡಗಳೇನು?

ಕರ್ನಾಟಕದಲ್ಲಿ ಮದ್ಯದಂಗಡಿ ಆರಂಭಕ್ಕೆ ಕಟ್ಟುನಿಟ್ಟಿನ ನಿಯಮ; ಹೊಸ ಪರವಾನಗೆಗೆ ಮಾನದಂಡಗಳೇನು?

June 28, 2026
ಕುರ್ಚಿ, ಸೋಫಾ ಮೇಲೆ ಬಟ್ಟೆ ಎಸೆಯುವ ಅಭ್ಯಾಸ ಇದೆಯೇ? ವಾಸ್ತು ಹೇಳುವ ನಂಬಿಕೆಗಳೇನು?

ಕುರ್ಚಿ, ಸೋಫಾ ಮೇಲೆ ಬಟ್ಟೆ ಎಸೆಯುವ ಅಭ್ಯಾಸ ಇದೆಯೇ? ವಾಸ್ತು ಹೇಳುವ ನಂಬಿಕೆಗಳೇನು?

June 28, 2026
ರೈಲಿನಲ್ಲಿ ಬಿಳಿ ಬೆಡ್‌ಶೀಟ್ ಮಾತ್ರ ಬಳಸುವುದೇಕೆ? ಇಲ್ಲಿದೆ ಭಾರತೀಯ ರೈಲ್ವೆಯ ಉತ್ತರ

ರೈಲಿನಲ್ಲಿ ಬಿಳಿ ಬೆಡ್‌ಶೀಟ್ ಮಾತ್ರ ಬಳಸುವುದೇಕೆ? ಇಲ್ಲಿದೆ ಭಾರತೀಯ ರೈಲ್ವೆಯ ಉತ್ತರ

June 28, 2026
Next Post
ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!