2020 ಟೋಕಿಯೊ ಒಲಿಂಪಿಕ್ಸ್‌ನಂತೆಯೇ, ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಪ್ರಸ್ತುತ ಆವೃತ್ತಿಯನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಭಾರತವು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ಮಾಡಿದ್ದು ಭಾರತಕ್ಕೆ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿದಂತೆ 19 ಪದಕಗಳು ಲಭಿಸಿದೆ.
ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ.
ಇದಕ್ಕೂ ಮೊದಲು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು ಒಟ್ಟು 4 ಪದಕಗಳನ್ನು ಪಡೆದಿತ್ತು, ಇದನ್ನು ಎರಡು ಪ್ರತ್ಯೇಕ ಆವೃತ್ತಿಗಳಲ್ಲಿ ನೋಂದಾಯಿಸಲಾಗಿದೆ (1984 ಮತ್ತು 2016).
ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಈ ಆವೃತ್ತಿಯಲ್ಲಿ ಇದುವರೆಗೆ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳ ಪರಿಚಯ ಇಲ್ಲಿದೆ:
ಭಾವಿನಬೆನ್ ಪಟೇಲ್ (ಟೇಬಲ್ ಟೆನಿಸ್) – ಬೆಳ್ಳಿ
ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾಬೆನ್ ಪಟೇಲ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಾಗ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿಕೊಂಡರು.
ಚಿನ್ನದ ಪದಕ ಪಂದ್ಯವನ್ನು ಆಡಿದ ಭಾವಿನಾ, ಆಗಸ್ಟ್ 29 ರಂದು ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್‌ನಲ್ಲಿ ಚೀನಾದ ಪ್ಯಾಡ್ಲರ್ ಯಿಂಗ್ ವಿರುದ್ಧ 7-11, 5-11, 6-11 ಅಂಕಗಳ ಅಂತದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸುಂಧಿಯಾ ಗ್ರಾಮದ 34 ವರ್ಷದ ಭಾವಿನಾಗೆ ಕೇವಲ 12 ತಿಂಗಳ ವಯಸ್ಸಿನಲ್ಲಿ ಪೋಲಿಯೋ ಇರುವುದು ಪತ್ತೆಯಾಯಿತು. ಆಕೆಯ ಪತಿ ನಿಕುಲ್ ಪಟೇಲ್ ಅವರಿಂದಲೇ ಭಾವಿನಾ ತರಬೇತಿ ಪಡೆದಿದ್ದಾರೆ. ಮತ್ತು ನಿಕುಲ್ ಅವರು ಗುಜರಾತ್ ಪರ ಜೂನಿಯರ್ ಕ್ರಿಕೆಟ್ ಕೂಡ ಆಡಿದ್ದಾರೆ.
ನಿಶಾದ್ ಕುಮಾರ್ (ಹೈ ಜಂಪ್) – ಬೆಳ್ಳಿ
ನಿಶಾದ್ ಕುಮಾರ್ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಟ್ಟರು. ಅವರು
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅಗಸ್ಟ್ 29 ರಂದು ನಡೆದ ಪುರುಷರ ಹೈಜಂಪ್ ಟಿ 47 ಈವೆಂಟ್‌ನಲ್ಲಿ 2.06 ಮೀಟರ್ ಜಿಗಿಯುವ ಮೂಲಕ ಬೆಳ್ಳಿ ಪದಕವನ್ನು ಗೆಲ್ಲುವುದಲ್ಲದೇ ಏಷ್ಯನ್ ದಾಖಲೆ ಕೂಡ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಉನಾದಿಂದ ಬಂದ 21 ವರ್ಷದ ನಿಷಾದ್ ತನ್ನ ಎಂಟನೇ ವಯಸ್ಸಿನಲ್ಲಿ ಅಪಘಾತಕ್ಕೀಡಾಗಿದ್ದರಿಂದ ಅವರ ಬಲಗೈಯನ್ನು ಕಳೆದುಕೊಂಡಿದ್ದರು.
ಅವನಿ ಲೇಖರ (ಶೂಟಿಂಗ್) – ಚಿನ್ನ
ಅವನಿ ಲೇಖರಾ ಆಗಸ್ಟ್ 30 ರಂದು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
2016ರ ರಿಯೋ ಗೇಮ್ಸ್ ಚಿನ್ನದ ಪದಕ ವಿಜೇತ ಚೀನಾದ ಕ್ಯುಪಿಂಗ್ ಯಾಂಗ್ ಅವರನ್ನು ಹಿಂದಿಕ್ಕುವ ಮೂಲಕ R-2 ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಅವನಿ ಚಿನ್ನದ ಪದಕ ಗೆದ್ದರು.
ಅವನಿ 249.6 ರ ಸಮನಾದ ವಿಶ್ವ ದಾಖಲೆಯನ್ನು ಮಾಡಿದ್ದು, ಇದು ಪ್ಯಾರಾಲಿಂಪಿಕ್ ನ ಹೊಸ ದಾಖಲೆಯಾಗಿದೆ.
ಏಸ್ ಪ್ಯಾರಾ-ಶೂಟರ್ 50 ಮೀ ರೈಫಲ್ 3 ಪೊಸಿಷನ್ ಎಸ್‌ಎಚ್ 1 ರಲ್ಲಿ ಮತ್ತೆ ಕಂಚಿನ ಪದಕವನ್ನು ಸೆಪ್ಟೆಂಬರ್ 3 ರಂದು ಪಡೆದಿದ್ದಾರೆ.
ಈಜುಗಾರ ಮುರಳಿಕಾಂತ್ ಪೆಟ್ಕರ್ (1972), ಜಾವೆಲಿನ್ ಥ್ರೋಯರ್ (2004 ಮತ್ತು 2016) ಮತ್ತು ಹೈ ಜಂಪರ್ (2016) ನಂತರ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ನಾಲ್ಕನೇ ಅಥ್ಲೀಟ್ ಆಗಿ ಅವನಿ ಹೊರಹೊಮ್ಮಿದ್ದಾರೆ.
ಜೈಪುರ ಮೂಲದ 19 ವರ್ಷದ ಅವನಿ 2012 ರಲ್ಲಿ ಕಾರು ಅಪಘಾತದಲ್ಲಿ spinal cord injuries ಆಗಿತ್ತು.
ಯೋಗೀಶ್ ಕಥುನಿಯಾ (ಡಿಸ್ಕಸ್ ಥ್ರೋ) – ಬೆಳ್ಳಿ..
ಯೋಗೀಶ್ ಕಥುನಿಯಾ ಅವರು ಆಗಸ್ಟ್ 30 ರಂದು ಭಾರತಕ್ಕೆ ಎರಡನೇ ಬೆಳ್ಳಿ ಪದಕವನ್ನು ಗೆದ್ದುಕೊಟ್ಟರು, ಅವರು ತಮ್ಮ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 44.38 ಮೀಟರ್ ಡಿಸ್ಕ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಬಾಜನರಾದರು.
ಸೇನೆಯ ಅಧಿಕಾರಿಯ ಮಗ ಯೋಗೀಶ್, ಹೊಸದಿಲ್ಲಿಯ ಕಿರೋರಿಮಲ್ ಕಾಲೇಜಿನಲ್ಲಿ ಬಿ.ಕಾಂ ಪದವೀಧರ.
ಯೋಗೀಶ್ ತನ್ನ ಎಂಟನೇ ವಯಸ್ಸಿನಲ್ಲಿ paralytic attack ಆಗಿತ್ತು, ಅದು ಅತನ ಕೈಕಾಲುಗಳಲ್ಲಿ ಸಮನ್ವಯದ ದುರ್ಬಲಗೊಳಿಸಿತ್ತು.
ದೇವೇಂದ್ರ ಜಜಾರಿಯಾ (ಜಾವೆಲಿನ್ ಥ್ರೋ) – ಬೆಳ್ಳಿ.
ಎರಡು ಬಾರಿ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಅನುಭವಿ ದೇವೇಂದ್ರ ಜಜಾರಿಯಾ ಅವರು ಆಗಸ್ಟ್ 30 ರಂದು ತನ್ನ ಮೂರನೇ ಪ್ಯಾರಾಲಿಂಪಿಕ್ ಪದಕವನ್ನು 64.35 ಮೀಟರ್ ಎಸೆದು ಎಫ್ 46 ವರ್ಗೀಕರಣದಲ್ಲಿ ಬೆಳ್ಳಿ ಪದಕ ಗೆದ್ದರು.
ರಾಜಸ್ಥಾನದ ಚುರು ಜಿಲ್ಲೆಯವರಾದ 40 ವರ್ಷದ ಜಜಾರಿಯಾ ಎಂಟನೆಯ ವಯಸ್ಸಿನಲ್ಲಿ ಮರ ಹತ್ತುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಎಡಗೈ ಕಳೆದುಕೊಂಡಿದ್ದರು.
ಸುಂದರ್ ಸಿಂಗ್ ಗುರ್ಜಾರ್ (ಜಾವೆಲಿನ್ ಥ್ರೋ) – ಕಂಚು
ಆಗಸ್ಟ್ 30 ರಂದು ಪುರುಷರ ಜಾವೆಲಿನ್ ಥ್ರೋ ಎಫ್ 46 ಫೈನಲ್‌ನಲ್ಲಿ, ಸುಂದರ್ ಸಿಂಗ್ ಗುರ್ಜಾರ್ 64.01 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಜಜಾರಿಯಾವನ್ನು ಹಿಂದಿಕ್ಕಿ ಕಂಚಿನ ಪದಕ ಪಡೆದರು.
ರಾಜಸ್ಥಾನದ ಕರೌಲಿಯಿಂದ ಬಂದ, 25 ವರ್ಷದ ಗುರ್ಜರ್ 2015 ರವರೆಗೆ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು, ಆದರೆ ಅವರು ತಮ್ಮ ಸ್ನೇಹಿತನ ಮನೆಯಲ್ಲಿ ಟಿನ್ ಶೇಡ್ ಫಿಕ್ಸ್ ಮಾಡುವಾಗ ಅಪಘಾತಕ್ಕೀಡಾದ ನಂತರ ಎಡಗೈಯ ಮಣಿಕಟ್ಟನ್ನು ಕತ್ತರಿಸಲಾಯಿತು. ಈಗ ಎಫ್ -46 ಜಾವೆಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ.
ಗುರ್ಜರ್ 2016 ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು ಆದರೆ ಕಾರ್ಯಕ್ರಮದ ಮೊದಲು ಕಾಲ್ ರೂಂನಲ್ಲಿ ತಡವಾಗಿ ವರದಿ ಮಾಡಿದ್ದಕ್ಕಾಗಿ ಅನರ್ಹರಾಗಿದ್ದರು.ಈಗ ಕಂಚು ಪದಕಕ್ಕೆ ಮುತ್ತಿಟ್ಟಿದ್ದಾರೆ.
ಸುಮಿತ್ ಆಂಟಿಲ್ (ಜಾವೆಲಿನ್ ಥ್ರೋ) – ಚಿನ್ನ
ಅಗಸ್ಟ್ 30 ರಂದು ಸುಮಿತ್ ಆಂಟಿಲ್ ಅವರು ಪುರುಷರ ಎಫ್ 64 ಕೆಟಗರಿಯಲ್ಲಿ ವಿಶ್ವದಾಖಲೆಯನ್ನು ನಿರ್ಮಿಸುವ ಮೂಲಕ ಚೊಚ್ಚಲ ಪ್ರದರ್ಶನದಲ್ಲಿಯೇ ಚಿನ್ನದ ಪದಕವನ್ನು ಗೆದ್ದುಕೊಂಡರು.
ಆಂಟಿಲ್ ತನ್ನ ಐದನೇ ಪ್ರಯತ್ನದಲ್ಲಿ ಜಾವೆಲಿನ್ ಅನ್ನು 68.55 ಮೀ.ಗೆ ಎಸೆದರು, ಈ ಒಂದು ಎಸೆತ ಹೊಸ ವಿಶ್ವದಾಖಲೆಯನ್ನೇ ಸೃಷ್ಟಿಸಿತು.
ಆಂಟಿಲ್ 2015 ರಲ್ಲಿ ಮೋಟಾರ್ ಬೈಕ್ ಅಪಘಾತದಲ್ಲಿ ಸಿಲುಕಿದ ನಂತರ ಮೊಣಕಾಲಿನ ಕೆಳಗೆ ತನ್ನ ಎಡಗಾಲನ್ನು ಕಳೆದುಕೊಳ್ಳಬೇಕಾಯಿತು. ಕಾಲನ್ನು ಕಳೆದುಕೊಳ್ಲುವ ಮುನ್ನ ಆತ ಇಬ್ಬ ಸಮರ್ಥ ಕುಸ್ತಿಪಟುವಾಗಿದ್ದ.
ಹರಿಯಾಣದ ಸೋನೆಪತ್ ಮೂಲದ 23 ವರ್ಷದ ಆಂಟಿಲ್ ದೆಹಲಿಯ ರಾಮಜಾಸ್ ಕಾಲೇಜಿನ ವಿದ್ಯಾರ್ಥಿ.
ಸಿಂಗರಾಜ್ ಅಧಾನ (ಶೂಟಿಂಗ್) – ಕಂಚು
ಆಗಸ್ಟ್ 31 ರಂದು ನಡೆದ ಪಿ 1 ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಸಿಂಹರಾಜ್ ಅಧನಾ ಕಂಚಿನ ಪದಕ ಗೆದ್ದಿದ್ದಾರೆ.
ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದ ಆಧಾನಾ ಒಟ್ಟು 216.8 ಅಂಕಗಳನ್ನು ಗಳಿಸಿದ್ದರು ಮತ್ತು ಈವೆಂಟ್‌ನಲ್ಲಿ ಎಂಟನೇ ವ್ಯಕ್ತಿಗಳ ಫೈನಲ್‌ಗೆ ಆರನೇ ಅತ್ಯುತ್ತಮ ಶೂಟರ್ ಆಗಿ ಅರ್ಹತೆ ಪಡೆದ ನಂತರ ಮೂರನೇ ಸ್ಥಾನವನ್ನು ಗಳಿಸಿ ಕಂಚಿನ ಪದಕ ಬಾಜನರಾಗಿದ್ದಾರೆ.
ಸೆಪ್ಟೆಂಬರ್ 4 ರಂದು ಪಿ 4 ಮಿಶ್ರ 50 ಮೀಟರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಕಂಚಿನ ನಂತರ ಈಗ ಬೆಳ್ಳಿ ಪದಕ ಪಡೆದಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕವನ್ನುತಂದುಕೊಟ್ಟಿದ್ದಾರೆ.
39 ವರ್ಷದ ಶೂಟರ್ ಸಿಂಹರಾಜ್, ಹರಿಯಾಣದ ಬಹದುರ್ಗದಿಂದ ಬಂದವರು ಪೋಲಿಯೊದಿಂದ ಬಳಲುತ್ತಿರುವ ಅವರು ನಾಲ್ಕು ವರ್ಷಗಳ ಹಿಂದೆ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದರು.
ಮರಿಯಪ್ಪನ್ ತಂಗವೇಲು (ಹೈ ಜಂಪ್) –ಬೆಳ್ಳಿ
ಹಾಲಿ ಚಾಂಪಿಯನ್ ಮರಿಯಪ್ಪನ್ ತಂಗವೇಲು ಆಗಸ್ಟ್ 31 ರಂದು ನಡೆದ ಪುರುಷರ ಹೈಜಂಪ್ ಟಿ 42 ಸ್ಪರ್ಧೆಯಲ್ಲಿ 1.86 ಮೀ ಎತ್ತರಕ್ಕೆ ಜಿಗುಯುವ ಮೂಲಕ ಬೆಳ್ಳಿ ಪದಕ ಗೆದ್ದರು.
26 ವರ್ಷದ ಮರಿಯಪ್ಪನ್ ಐದು ವರ್ಷಗಳ ಹಿಂದೆ ರಿಯೋ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಟೋಕಿಯೊದಲ್ಲಿ ಬೆಳ್ಳಿಯ ಪದಕದೊಂದಿಗೆ, ಮರಿಯಪ್ಪನ್ ಜೋಗಿಂದರ್ ಸಿಂಗ್ ಬೇಡಿ ಮತ್ತು ದೇವೇಂದ್ರ ಜಜಾರಿಯಾ ನಂತರ ಪ್ಯಾರಾಲಿಂಪಿಕ್ಸ್‌ನಲ್ಲಿ ಬಹು ಪದಕಗಳನ್ನು ಗೆದ್ದ ಮೂರನೇ ಭಾರತೀಯರಾಗಿದ್ದಾರೆ.
ತಮಿಳುನಾಡಿನವರಾದ ಮರಿಯಪ್ಪನ್ ಅವರು ಐದು ವರ್ಷದವನಿದ್ದಾಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಶಾಲೆಗೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಬಸ್ಸಿನ ಚಕ್ರ ದಲ್ಲಿ ಮರಿಯಪ್ಪನ್ ಅವರ ಬಲಗಾಲಿನ ಮೇಲೆ ಅರಿದು ಮೊಣಕಾಲಿ ಪುಡಿಯಾಗಿತ್ತು ಹಾಗಾಗಿ ಅವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದರು .
ತಂದೆ ಕುಟುಂಬವನ್ನು ತ್ಯಜಿಸಿದ ನಂತರ ಒಂಟಿ ತಾಯಿಯಿಂದ ಬೆಳೆದ ಮರಿಯಪ್ಪನ್ ಕಡು ಬಡತನದ ವಿರುದ್ಧ ಹೋರಾಡಿದರು, ಏಕೆಂದರೆ ಅವರ ತಾಯಿ ತರಕಾರಿ ಮಾರುವ ಮೊದಲು ಕೂಲಿ ಕೆಲಸ ಮಾಡುತ್ತಿದ್ದರು.
ಶರದ್ ಕುಮಾರ್ (ಹೈ ಜಂಪ್) – ಕಂಚು
1.83ಮೀ ಎತ್ತರಕ್ಕೆ ಜಿಗಿಯುವ ಮೂಲಕ ಶರದ್ ಕುಮಾರ್ ಆಗಸ್ಟ್ 31 ರಂದು ಪುರುಷರ ಹೈಜಂಪ್ ಟಿ 42 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
ಬಿಹಾರದ ಪಾಟ್ನಾದಿಂದ ಬಂದಿರುವ ಶರದ್, ದೆಹಲಿಯ ಮಾಡರ್ನ್ ಸ್ಕೂಲ್ ಮತ್ತು ಕಿರೋರಿಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಡಾರ್ಜಿಲಿಂಗ್‌ನ ಸೇಂಟ್ ಪಾಲ್ಸ್ ಶಾಲೆಯಲ್ಲಿ 7 ನೇ ತರಗತಿಯಲ್ಲಿದ್ದಾಗ ಎತ್ತರ ಜಿಗಿತವನ್ನು ಮಾಡಿದ್ದರು.
ಶರದ್ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ಕೂಡ ಆಗಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್‌ಗೆ ತಯಾರಿ ನಡೆಸಲು 2017 ರಿಂದ ಉಕ್ರೇನ್‌ನಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ.
ಪೋಲಿಯೋ ಲಸಿಕೆ ಡೋಸ್ ನೀಡಿದ ಕಾರಣ ಶರದ್ ಎರಡು ವರ್ಷದ ಮಗುವಾಗಿದ್ದಾಗ ಎಡಗಾಲಿನಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು.
ಪ್ರವೀಣ್ ಕುಮಾರ್ (ಹೈಜಂಪ್) – ಬೆಳ್ಳಿ
ಪ್ರವೀಣ್ ಕುಮಾರ್ ಅವರು ಸೆಪ್ಟೆಂಬರ್ 3 ರಂದು ನಡೆದ ಪುರುಷರ ಹೈಜಂಪ್ ಟಿ 64 ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಎರಡು ದಿನಗಳ ಪದಕದ ಬರವನ್ನು ನೀಗಿಸಿದ್ದರು . 2.07 ಮೀ ಜಿಗಿತದೊಂದಿಗೆ ಏಷ್ಯನ್ ದಾಖಲೆ ಮಾಡಿದ್ದಾರೆ.
ಗೌತಮ್ ಬುದ್ಧ ನಗರ ಜಿಲ್ಲೆಯ ಜೇವರ್ ಬಳಿಯ ಹಳ್ಳಿಯಿಂದ ಬಂದ ಪ್ರವೀಣ್ ಮತ್ತು ದೆಹಲಿಯ ಮೋತಿಲಾಲ್ ನೆಹರು ಕಾಲೇಜಿನಲ್ಲಿ ಬಿ.ಎ. ಎರಡನೇ ವರ್ಷದ ವಿದ್ಯಾರ್ಥಿ, ತನ್ನ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೋಂದಾಯಿಸುವುದಲ್ಲದೆ, ಟೋಕಿಯೊದಲ್ಲಿ ಭಾರತೀಯ ತಂಡದಲ್ಲಿ ಅತ್ಯಂತ ಕಿರಿಯ ಪದಕ ವಿಜೇತರಾಗಿದ್ದಾರೆ. ಪ್ರವೀಣ್ ಅವರ ದುರ್ಬಲತೆ, ಇದು ಜನ್ಮಜಾತವಾಗಿದ್ದು, ಆತನ ಸೊಂಟವನ್ನು ಎಡಗಾಲಿಗೆ ಜೋಡಿಸುವ ಮೂಳೆಗಳ ಮೇಲೆ ಪರಿಣಾಮ ಬೀರಿತ್ತು.
ಹರ್ವಿಂದರ್ ಸಿಂಗ್ (ಬಿಲ್ಲುಗಾರಿಕೆ) – ಕಂಚು
ಸೆಪ್ಟೆಂಬರ್ 3 ರಂದು ಪ್ಯಾರಾಲಿಂಪಿಕ್ಸ್‌ನ ಬಿಲ್ಲುಗಾರಿಕೆಯಲ್ಲಿ ಕೊರಿಯಾದ ಕಿಮ್ ಮಿನ್ ಸು ಅವರನ್ನು ಸೋಲಿಸುವ ಮೂಲಕ ಪುರುಷರ ವೈಯಕ್ತಿಕ ರಿಕರ್ವ್ ಕಂಚಿನ ಪದವನ್ನು ಹರ್ವಿಂದರ್ ಸಿಂಗ್ ಗೆದ್ದಿದ್ದಾರೆ.
ಹರ್ವಿಂದರ್ 6-5 (26-24, 27-29, 28-25, 25-25, 26-27) (10-8) ಅಂಕಗಳ ಮೂಲಕ ಪ್ಲೇಆಫ್ ನಲ್ಲಿ ಕಂಚಿನ ಪದಕ ಗೆದ್ದರು.
ಹರಿಯಾಣದ ಕೈತಾಲ್ ಬಳಿಯ ಗುಹ್ಲಾ ಚೀಕಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಹರ್ವಿಂದರ್ ಅರ್ಥಶಾಸ್ತ್ರ ವಿದ್ವಾಂಸರಾಗಿದ್ದು ಪಂಜಾಬಿ ವಿಶ್ವವಿದ್ಯಾಲಯ, ಪಟಿಯಾಲದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ.
ಹರ್ವಿಂದರ್ ಅವರಿಗೆ ಕೇವಲ ಒಂದೂವರೆ ವರ್ಷದವನಿದ್ದಾಗ ಡೆಂಗ್ಯೂ ಇತ್ತು ಮತ್ತು ಸ್ಥಳೀಯ ವೈದ್ಯರು ಆತನಿಗೆ ಇಂಜೆಕ್ಷನ್ ನೀಡಿದ್ದರು ಮತ್ತು ಅವರ ಕಾಲುಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದವು.
ಮನೀಶ್ ನರ್ವಾಲ್ (ಶೂಟಿಂಗ್) – ಚಿನ್ನ
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಪ್ಟೆಂಬರ್ 4 ರಂದು ನಡೆದ P4 ಮಿಶ್ರ 50m ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಒಟ್ಟು 218.2 ಗುಂಡು ಹಾರಿಸುವ ಮೂಲಕ ಮನೀಶ್ ನರ್ವಾಲ್ ಭಾರತದ ಮೂರನೇ ಚಿನ್ನದ ಪದಕ ಗೆದ್ದರು.
ಚೊಚ್ಚಲ ಕ್ರೀಡಾಕೂಟದಲ್ಲಿ 19 ವರ್ಷದ ನರ್ವಾಲ್ ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿದಿದ್ದಲ್ಲದೇ, ಈ ವಿಭಾಗದಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ.
ಹರಿಯಾಣದ ಬಲ್ಲಭಗಡದಿಂದ ಬಂದಿರುವ ನರ್ವಾಲ್ ಅವರ ಬಲಗೈ ದುರ್ಬಲತೆಯಿದೆ.
ಪ್ರಮೋದ್ ಭಗತ್ (ಬ್ಯಾಡ್ಮಿಂಟನ್) – ಚಿನ್ನ
ಪ್ರಸ್ತುತ ವಿಶ್ವ ಚಾಂಪಿಯನ್ ಶಟ್ಲರ್ ಪ್ರಮೋದ್ ಭಗತ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಭೇಟೆಯಾಡಿದ್ದಾರೆ. ಸರಣಿಯಲ್ಲಿ ಭಗತ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದರು ಈ ಸಾಧನೆ ಮಾಡಿದ್ದಾರೆ.
ಈ ವರ್ಷ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಪಾದಾರ್ಪಣೆ ಮಾಡುವುದರೊಂದಿಗೆ, ಪ್ರಸ್ತುತ ವಿಶ್ವ ನಂ .1 ಭಗತ್, ಈ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು.
ಯೊಗೊ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 45 ನಿಮಿಷಗಳ ಕಾಲ ನಡೆದ ರೋಚಕ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಬೆಥೆಲ್ ವಿರುದ್ಧ 21-14, 21-17ರಲ್ಲಿ ಮೇಲುಗೈ ಸಾಧಿಸಿದ್ದರಿಂದ ಅಗ್ರ ಶ್ರೇಯಾಂಕಿತ ಭಾರತೀಯ ಗೆಲುವು ಸಾಧಿಸಿದರು. ಇವರು ಏಷ್ಯನ್ ಚಾಂಪಿಯನ್ ಕೂಡ ಆಗಿದ್ದರು.
4 ವರ್ಷದವನಿದ್ದಾಗ ಪೋಲಿಯೋಗೆ ತುತ್ತಾದ ಭಗತ್ ತನ್ನ ನೆರೆಹೊರೆಯವರ ಆಟವನ್ನು ನೋಡಿ ನಂತರ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ, ಅವರು 2006 ರಲ್ಲಿ ಸ್ಪರ್ಧಾತ್ಮಕ ಪ್ಯಾರಾ ಬ್ಯಾಡ್ಮಿಂಟನ್‌ಗೆ ಪ್ರವೇಶಿಸುವ ಮೊದಲು ಸಮರ್ಥ ಆಟಗಾರರ ವಿರುದ್ಧ ಸ್ಪರ್ಧಿಸಿದರು.
ಅವರು ಅಂತಿಮವಾಗಿ 2018 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ನಾಲ್ಕು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದಿದ್ದರು ಅದರಲ್ಲಿ ಒಂದು ಚಿನ್ನ ಮತ್ತು ಕಂಚನ್ನು ಒಳಗೊಂಡಂತೆ 45 ಅಂತರಾಷ್ಟ್ರೀಯ ಪದಕಗಳನ್ನು ಬಂದಿವೇ ಈಗ ದೇಶದ ಅತ್ಯುತ್ತಮ ಪ್ಯಾರಾ ಶಟ್ಲರ್ ಆಗಿ ಹೊರಹೊಮ್ಮಿದ್ದಾರೆ.
ಮನೋಜ್ ಸರ್ಕಾರ್ (ಬ್ಯಾಡ್ಮಿಂಟನ್) – ಕಂಚು
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಶಟ್ಲರ್ ಮನೋಜ್ ಸರ್ಕಾರ್ ಕಂಚಿನ ಪದಕ ಪಡೆದರು. ಸರ್ಕಾರ್ ಮೂರನೇ ಸ್ಥಾನ ಪ್ಲೇ-ಆಫ್ ನಲ್ಲಿ ಜಪಾನ್ ನ ಡೈಸುಕೆ ಫುಜಿಹರಾ ಅವರನ್ನು ಸೋಲಿಸಿ ಪದಕವನ್ನು ಪಡೆದಿದ್ದಾರೆ. ಫುಜಿಹರಾ ವಿರುದ್ಧ 22-20, 21-13 ಅಂತರದಲ್ಲಿ ಗೆಲುವುಸಾಧಿಸಿದ್ದಾರೆ.
ಸೆಮಿಫೈನಲ್‌ನಲ್ಲಿ, ಎರಡನೇ ಶ್ರೇಯಾಂಕಿತ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಸರ್ಕಾರ್ ಯಾವುದೇ ರೀತಿಯ ಲಯವನ್ನು ಪಡೆಯಲು ಸಾಧ್ಯವಾಗಲಿಲ್ಲ, ಪುರುಷರ ಸಿಂಗಲ್ಸ್ ಎಸ್‌ಎಲ್ 3 ವರ್ಗದಲ್ಲಿ 8-21, 10-21 ಅಂತದಲ್ಲಿ ಸೋತರು. ನಂತದಲ್ಲಿ ಚೇತರಿಸಿಕೊಂಡು ಅವರು ಕಂಚು ಪಡೆಯಲು ಭರ್ಜರಿ ಪ್ರದರ್ಶನ ನೀಡಿದರು.
31 ವರ್ಷದ ಸರ್ಕಾರ್, ಒಂದು ವರ್ಷ ವಯಸ್ಸಿನಲ್ಲಿ ಪೋಲಿಯೊಗೆ ತುತ್ತಾದ ನಂತರ ಅವರ ಬಲ ಕಾಲಿನ ಮೇಲೆ ಪರಿಣಾಮ ಬೀರಿತು.
ಸುಹಾಸ್ ಯತಿರಾಜ್ (ಬ್ಯಾಡ್ಮಿಂಟನ್) – ಬೆಳ್ಳಿ
ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಕೊನೆಯ ದಿನದಂದು ಭಾರತದ ಸಿಂಗಲ್ಸ್ ಎಸ್‌ಎಲ್ 4 ಕ್ಲಾಸ್ ಫೈನಲ್‌ನಲ್ಲಿ ಸುಹಾಸ್ ಯತಿರಾಜ್ ಅವರು ಫ್ರಾನ್ಸ್‌ನ ಲ್ಯೂಕಾಸ್ ಮಜೂರ್ ವಿರುದ್ಧ ಸೆಣಸಾಡಿ ಕಡೆಗೆ ಸೋತು ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಮತ್ತು ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿರುವ ಸುಹಾಸ್ ಅವರ ಪಾದದ ಒಂದು ಅಂಗದಲ್ಲಿ ದುರ್ಬಲತೆ ಇದೆ.
ಅವರು ಮೂರು ಪಂದ್ಯಗಳಲ್ಲಿಯೂ ಹೋರಾಡಿ 21-15, 17-21, 15-21 ಅಂಕಗಳ ಅಂತದಲ್ಲಿ ಸುಹಾಸ್ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಕೃಷ್ಣ ನಗರ (ಬ್ಯಾಡ್ಮಿಂಟನ್) – ಚಿನ್ನ
ಪುರುಷರ ಸಿಂಗಲ್ಸ್ SH6 ಕ್ಲಾಸ್ ಫೈನಲ್‌ನಲ್ಲಿ ಮೂರು ಆಟಗಳಲ್ಲಿ ಹಾಂಕಾಂಗ್‌ನ ಮನ್ ಕೈ ಚು ಅವರನ್ನು ಸೋಲಿಸಲು ರೋಮಾಂಚಕ ಪ್ರದರ್ಶನ ನೀಡಿದ ಕೃಷ್ಣ ನಗರ ಅವರು ಪ್ಯಾರಾಲಿಂಪಿಕ್ಸ್‌ನ ಕೊನೆಯ ದಿನದಂದು ಭಾರತಕ್ಕೆ ಮತ್ತೊಂದು ಚಿನ್ನದ ಪದಕವಿಲ್ಲದೆ ಕೊನೆಗೊಳ್ಳದಂತೆ ನೋಡಿಕೊಂಡಿದ್ದಾರೆ.
22 ವರ್ಷದ ರಾಜಸ್ಥಾನ ಹುಡುಗ 21-17, 16-21, 21-17 ಅಂಕಗಳೊಂದಿಗೆ ವಿಜಯಿಯಾದರು.
ಇದು ಜಪಾನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಐದನೇ ಮತ್ತು ಅಂತಿಮ ಚಿನ್ನವಾಗಿದೆ.