ಪ್ರಜ್ವಲ್ ರೇವಣ್ಣ (Prajwal revanna) ತಾಯಿ ಭವಾನಿ ರೇವಣ್ಣಗೂ (Bhavani Revanna) ಈಗ ಟೆನ್ಸನ್ ಕಾಡ್ತಿದೆ. ಪುತ್ರನ ಶರಣಾಗತಿ ಹೇಳಿಕೆ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆ.ಆರ್ ನಗರ (KR NAgara) ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಕೂಡ ಕೇಳಿ ಬಂದಿತ್ತು. ಎಸ್‌ಐಟಿ (SIT)|ನೀಡಿದ್ದ ನೋಟಿಸ್‌ಗೆ ಈವರೆಗೂ ಹಾಜರಾಗದ ಭವಾನಿ ರೇವಣ್ಣ ಇದೀಗ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನಿನ್ನೆ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಎಸ್‌ಐಟಿ ನೋಟಿಸ್ ನೀಡಿದ ವಿಚಾರದ ಬಗ್ಗೆ ಭವಾನಿ ಪರ ವಕೀಲರು ಪ್ರಶ್ನಿಸಿದ್ದಾರೆ. ಭವಾನಿ ರೇವಣ್ಣಗೆ ಯಾವ ನಿಯಮದಡಿ ನೋಟಿಸ್ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಹಾಗಾಗಿ ಅವರನ್ನೂ ಬಂಧಿಸೋ ಸಾಧ್ಯತೆ ಇರೋದ್ರಿಂದ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಭವಾನಿ ರೇವಣ್ಣನವರ ಪರ ವಕೀಲರು ಎತ್ತಿರುವ ಪ್ರಶ್ನೆಗೆ ಉತ್ತರಿಸುವಂತೆ ಎಸ್‌ಐಟಿಗೆ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು ಇಂದು ವಿಚಾರಣೆಗೆ ಬರಲಿದೆ. ಈ ಹಿನ್ನೆಲೆ ಇಂದು ಭವಾನಿ ರೇವಣ್ಣಗೆ ಮಹತ್ವದ ದಿನವಾಗಿದೆ.