ಪ್ರಜ್ವಲ್ ರೇವಣ್ಣ (Prajwal revanna) ವಿಡಿಯೋ ಸಂದೇಶ ವಿಚಾರಕ್ಕೆ ಗೃಹಸಚಿವ ಡಾ. ಜಿ. ಪರಮೇಶ್ವರ್ (Prameshwar) ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನಲ್ಲಿ (Tumkur) ಮಾತನಾಡಿದ ಅವರು, ಎಸ್‌ಐಟಿಗೆ (SIT) ಸಹಕಾರ ಮಾಡ್ತಿನಿ ಅಂತ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದನ್ನ ನಾನು ಸ್ವಾಗತ ಮಾಡ್ತಿನಿ ಎಂದಿದ್ದಾರೆ.

ಎಸ್‌ಐಟಿ ಬಳಿ ಏನ್ ಎವಿಡೆನ್ಸ್, ಏನು ಮಾಹಿತಿಗಳಿವೆ ಅದರ ಆಧಾರದ ಮೇಲೆ ತನಿಖೆ ಮುಂದುವರಿಯುತ್ತೆ. ಪ್ರಜ್ವಲ್ ರೇವಣ್ಣ ಬಂದ ತಕ್ಷಣವೇ ಬಂಧನ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನ ನೋಡಬೇಕು, ಅವರೇ ಶರಣಾಗ್ತಿನಿ ಅಂತ ಹೇಳಿದ್ದಾರೆ. ಅರೆಸ್ಟ್ (Arrest) ಅಂತು ಆಗ್ತಾರೆ ಎಂದು ಹೇಳಿದ್ದಾರೆ.
ಅರೆಸ್ಟ್ ಮಾಡೋಕೆ ಈಗಾಗಲೇ ವಾರಂಟ್ (Warrant) ಇಸ್ಕೊ ಆಗಿದೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟು, ವಾರಂಟ್ ಕೊಟ್ಟಿರೋದ್ರಿಂದ ಅರೆಸ್ಟ್ ಮಾಡೋಕು. ಈಗ ಅವರೇ ಶರಣಾಗ್ತಾರೆ ಅನ್ನುವಾಗ ಅದನ್ನ ಯಾವ ರೀತಿಯಾಗಿ ಎಸ್ ಐಟಿ ಅವರು ತೆಗೆದುಕೊಳ್ತಾರೆ ನೋಡಬೇಕು ಅಂತ ಪರಮೇಶ್ವರ್ ಹೇಳಿದ್ದಾರೆ.