ಮಾಜಿ ಶಾಸಕನಿಗೆ ನಿಜಕ್ಕು ಇದ್ಯಾ ಪೆನ್ ಡ್ರೈವ್ ಲಿಂಕ್..?
ಇದಕ್ಕಿದ್ದಂತೆ ಪ್ರೀತಂ ಗೌಡರ ಮೇಲೆ ಈ ಆರೋಪ ಬಂದಿದ್ದು ಏಕೆ?
ಪೆನ್ ಡ್ರೈವ್ ಹಂಚಿಕೆಯಲ್ಲಿ ಪ್ರೀತಂ ಗೌಡ ಪಾತ್ರ ನಿಜಕ್ಕು ಇದ್ಯಾ!!
ತನ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಪ್ರೀತಂ ಗೌಡ..
ಹೈಕೋರ್ಟ್ ಸಹ ಇದೀಗ ಪ್ರೀತಂ ಗೌಡನನ್ನು ಬಂಧಿಸದಂತೆ ಆದೇಶಿಸಿದೆ..
ಆದರೆ ತನಿಖೆಗೆ ಸಹಕಾರ ನೀಡಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ..
ಇದ್ರಿಂದ ಇಂದು ಎಸ್ಐಟಿ ಮುಂದೆ ಹಾಜರ್ ಆಗುವ ಸಾಧ್ಯತೆ..
ಪ್ರಜ್ವಲ್ ರೇವಣ್ಣ ಕಸ್ಟಡಿ ಇಂದಿಗೆ ಅಂತ್ಯ..
ಇಂದು ಕೋರ್ಟ್ ಮುಂದೆ ಹಾಜರು ಪಡಿಸಲಿರುವ ಪೊಲೀಸರು..
ಇಷ್ಟು ದಿನ ಪ್ರಜ್ವಲ್ ವಿಚಾರಣೆ ಮಾಡಿರುವ ಎಸ್ಐಟಿ..
ಆ ವಿಚಾರಣೆಯನ್ನು ಆಧರಿಸಿ ಪ್ರೀತಂ ಗೌಡಗೆ ಪ್ರಶ್ನೆ ಮಾಡಲಿರುವ ಎಸ್ಐಟಿ..
ಅನೇಕ ಪ್ರಶ್ನೆಗಳನ್ನು ಪ್ರೀತಮ ಗೌಡಗೆ ಕೇಳಲಿರುವ ಎಸ್ಐಟಿ ಅಧಿಕಾರಿಗಳು.