ಮುಂದಿನ 18ನೇ ಐಪಿಎಲ್ (IPL 18th season) ಆವೃತ್ತಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers bangalore) ಫ್ರಾಂಚೈಸಿ ಹೊಸ ನಿರ್ಧಾರ ಕೈಗೊಂಡಿದೆ. ಆರ್ಸಿಬಿ (RCB) ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ದಿನೇಶ್ ಕಾರ್ತಿಕ್ (Dinesh Karthik) ಅವರನ್ನ ನೇಮಿಸಿದೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದು, ಮುಂದಿನ ಐಪಿಎಲ್ ನಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆರ್ಸಿಬಿ ಫ್ರಾಂಚೈಸಿ ನಿರ್ಧಾರಕ್ಕೆ ಡಿಕೆ ಸಂತಸ ವ್ಯಕ್ತಪಡಿಸಿದ್ದು, ಟ್ರೋಫಿ ಬರ ನೀಗಿಸುವ ಭರವಸೆ ನೀಡಿದ್ದಾರೆ.

ಡಿಕೆ (DK) ಅಂತಾನೇ ಫೇಮಸ್ ಆಗಿರುವ ದಿನೇಶ್ ಕಾರ್ತಿಕ್, ಬಹಳ ಕಾಲದಿಂದ ಆರ್ಸಿಬಿ ತಂಡದಲ್ಲಿ ಆಡಿದ್ದಾರೆ. ಆರ್ಸಿಬಿ ಯಲ್ಲಿ ಡಿಕೆ ಪಾತ್ರ ದೊಡ್ಡದಿತ್ತು. ಫಿನಿಶರ್ ಆಗಿ ಆರ್ಸಿಬಿ ಗೆ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಡುವಲ್ಲಿ ಡಿಕೆ ಪಾತ್ರ ದೊಡ್ಡದು. ಕಳೆ ಐಪಿಎಲ್ ಆವೃತ್ತಿಯ ಕೊನೆಗೆ ಡಿಕೆ ತಮ್ಮ ರಿಟ್ರ್ ಮೆಂಟ್ ಘೋಷಣೆ ಮಾಡಿದ್ದರು.