ಗುವಾಹಟಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯುವ ಪ್ರಯತ್ನದಲ್ಲಿ ಪೊಲೀಸರು ಇಂಫಾಲ್ ಕಣಿವೆ, ಚುರಾಚಂದ್ಪುರ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಕುಕಿ-ಜೋ ಸಂಘಟನೆಗಳು ಮೇ 3 ಅನ್ನು “ಪ್ರತ್ಯೇಕ ದಿನ” ಎಂದು ಆಚರಿಸುತ್ತವೆ. ಆದರೆ ಸಮುದಾಯದ ಎರಡು ವಿದ್ಯಾರ್ಥಿ ಸಂಘಟನೆಗಳು ಈ ದಿನದಂದು ಕುಕಿ ಪ್ರದೇಶಗಳಲ್ಲಿ ಇರುವ ಎಲ್ಲಾ ಶಿಕ್ಷಣ ಸಂಸ್ಥೆಗಳು, ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸ್ಥಗಿತಗೊಳಿಸುವಂತೆ ಕರೆ ನೀಡಿವೆ. ಇನ್ನೊಂದು ಕಡೆ ಶಾಂತಿ ದಿನ ಆಚರಣೆಗೆ ತಯಾರಿ ನಡೆದಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಮೈಟೆ ಬಹುಸಂಖ್ಯಾತ ಇಂಫಾಲ್ ಕಣಿವೆಯಲ್ಲಿ, ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ ಬಹಿರಂಗ ಸಮಾವೇಶ ಆಯೋಜಿಸುತ್ತಿದ್ದು, ಸಮಾಜದ ನಾಯಕರು, ವಿದ್ವಾಂಸರು, ಗಣ್ಯ ವ್ಯಕ್ತಿಗಳು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಭಾಷಣ ಮಾಡಲಿದ್ದಾರೆ. ಘರ್ಷಣೆಯಲ್ಲಿ ಪ್ರಾಣ ಕಳೆದುಕೊಮಡವರ ಕುಟುಂಬ ಹಾಗು ಸಂತ್ರಸ್ತರನ್ನು ಗೌರವಿಸಲು ಮೇಣದ ಬತ್ತಿಯನ್ನು ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ನಾವು ಈ ವರ್ಷ ಮೇ 3 ರಂದು ಆಚರಿಸುತ್ತೇವೆ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತೇವೆ. ದುರಂತ, ಹಿಂಸಾಚಾರಕ್ಕೆ ಬಲಿಯಾದವರ ಸ್ಮರಣೆಯನ್ನು ನಾವು ಗೌರವಿಸುತ್ತೇವೆ. ಮೇ 3 ರಅಂದು ಬಹುಸಂಖ್ಯಾತ ಮೈತೆ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ, ಬುಡಕಟ್ಟು ಜನಾಂಗದವರು ಗುಡ್ಡಗಾಡು ಜಿಲ್ಲೆಗಳಲ್ಲಿ ನಡೆಸಿದ ಮೆರವಣಿಗೆಯ ನಂತರ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.

ಮಣಿಪುರದ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಹಾಗೂ ಸುಮಾರು 60,000 ಜನರನ್ನು ಸ್ಥಳಾಂತರಿಸಲಾಯಿತು. ಮನಿಪುರ ಜನಾಂಗೀಯ ಹಿಂಸಾಚಾರದಿಂದ ವಿಭಜನೆ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರ ಆದವರು ಪರಿಹಾರ ಶಿಬಿರಗಳಲ್ಲೇ ಉಳಿದಿದ್ದಾರೆ. ಮೈಟೈಸ್ ಮತ್ತು ಕುಕಿ-ಜೊ ಬುಡಕಟ್ಟು ಜನಾಂಗದವರು ಪರಸ್ಪರರ ಪ್ರದೇಶಗಳನ್ನು ಪ್ರವೇಶಿಸಲು ಇನ್ನೂ ಸಾಧ್ಯವಾಗುತ್ತಿಲ್ಲ.

ಈ ವರ್ಷ ಮಾರ್ಚ್ 8 ರಂದು, ಕುಕಿ-ಜೋ ಬುಡಕಟ್ಟು ಜನಾಂಗದವರ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಚಾಲಿತ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಯ್ತು. ಆದರೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಬಸ್ ಮೇಲೆ ದಾಳಿ ಮಾಡಿದರು. ಹಿಂಸಾಚಾರವನ್ನು ಪ್ರಚೋದಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು. ಇವತ್ತು ಎಲ್ಲೆಡೆ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.







