ಗೋವಾದ (Goa) ಭೀಕರ ದುರಂತ ಸಂಭವಿಸಿದ್ದು , ದೇವರ ದರ್ಶನ ಪಡೆಯಲು ತಆಗಮಿಸಿದ್ದ ಭಕ್ತರು ಕಾಲ್ತುಳಿತದಲ್ಲಿ (Stamped) ಸಾವನ್ನಪ್ಪಿದ್ದಾರೆ. ಗೋವಾದ ಶಿರ್ಗಾಂವ್ನಲ್ಲಿರುವ ಶ್ರೀ ಲೈರಾಯಿ ಜಾತ್ರೆಯಲ್ಲಿ (Larai) ಸಾವಿರಾರು ಜನರು ಸೇರಿದ್ದ ವೇಳೆ ಈ ಕಾಲ್ತುಳಿತ ಸಂಭವಿಸಿದೆ.

ಇನ್ನು ಈ ದುರಂತದಲ್ಲಿ ಈಗಾಗಲೇ 7 ಜನ ಸಾವನ್ನಪ್ಪಿದ್ದು, ಸುಮಾರು 70ಕ್ಕೂ ಹೆಚ್ಚು ಜನರಿಗೆ ಗಾಯಗಗಳಾಗಿದೆ.ಈ ಪೈಕಿ ಕೆಲವ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು (ಮೇ 3) ಶಿರಗಾಂವ್ನಲ್ಲಿರುವ ಲೈರಾಯಿ ದೇವಿಯ ವಾರ್ಷಿಕ ಹಬ್ಬವಾಗಿದ್ದು, ಭಕ್ತರು ದೇವಿಯ ಮೇಲಿನ ಭಕ್ತಿಯಿಂದ ಕೊಂಡ ಹಾಯುತ್ತಾರೆ. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.ಆದ್ರೆ ಈ ಬಾರಿ ಈ ಅನಿರೀಕ್ಷಿತ ದುರಂತ ಸಂಭವಿಸಿದೆ.






