
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಾರ್ಯಕರ್ತರಿಗೆ ಎಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದು, ಕಾರ್ಯಕರ್ತರ ಅಹವಾಲು ಸ್ವೀಕಾರ ನಮ್ಮ ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಇಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೋ ಭವನದ ಬಳಿ ನಾನು ನಿಮ್ಮ ಅಹವಾಲುಗಳಿಗೆ ಕಿವಿಯಾಗಲು ಕಾಯುತ್ತಿರುತ್ತೇನೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ನಮ್ಮವರ ಕಷ್ಟಕ್ಕೆ ನೆರವಾಗುವುದು ಕುಟುಂಬದ ಸದಸ್ಯನಾದ ನನ್ನ ಕರ್ತವ್ಯ ಎಂದು ಎಕ್ಸ್ ಮೂಲಕ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಎಂದರೆ ಕೇವಲ ಬಾವುಟ ಕಟ್ಟಿ ಜೈಕಾರ ಹಾಕಿದವರು ಮಾತ್ರ ಅಲ್ಲ. ಯಾರೆಲ್ಲಾ ವೋಟ್ ಹಾಕಿದ್ದಾರೋ ಅವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದಾರೆ. ಹಾಗಾಗಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹಾಜರಾಗಿ ತಮಗೆ ಆಗಬೇಕಿರುವ ಕೆಲಸಗಳು ಹಾಗು ಆಗಿರುವ ಸಮಸ್ಯೆಗಳ ಬಗ್ಗೆ ಸಿಎಂ ಗಮನ ಸೆಳೆಯಬಹುದಾಗಿದೆ.
