
ಮೈಸೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಾಗು ಮೋದಿ ಸರ್ಕಾರದ ನಿರ್ಧಾರದ ಬ ಗ್ಗೆ ಸದಾ ಕಾಲ ವಿಶ್ಲೇಷಣೆ ಮಾಡುತ್ತ ಚಾಟಿ ಬೀಸುವ ನಟ ಪ್ರಕಾಶ್ ರಾಜ್ ಇವತ್ತು ಮೈಸೂರಿನಲ್ಲಿ ವಾಗ್ದಾಳಿ ಮಾಡಿದ್ದಾರೆ.
ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಮಹಾನಟ ಎಂದು ವ್ಯಂಗ್ಯವಾಡಿದ್ದಾರೆ ನಟ ಪ್ರಕಾಶ್ ರಾಜ್. ಮೈಸೂರಿನ ಬಹುರೂಪಿ ರಂಗಾಯಣದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಮಹಾ ನಟರೊಬ್ಬರೊಬ್ಬರು 24 ಗಂಟೆಗಳ ಕಾಲ ಕೆಲಸ ಮಾಡ್ತಾರೆ ಎಂದು ಎಲ್ ಅಂಡ್ ಟಿ ಅಧ್ಯಕ್ಷ ಸುಬ್ರಮಣ್ಯನ್ ಹೇಳಿಕೆ ನೀಡಿದ್ದಾರೆ. ಭಾನುವಾರ ಯಾಕೆ ಮನೆಯಲ್ಲಿ ಕೆಲಸ ಮಾಡ್ತೀರಿ ಎಂದಿದ್ದಾರೆ.
ಅದೇ ಹೆಂಡತಿ ಮುಖವನ್ನು ಎಷ್ಟು ಅಂತ ನೋಡ್ತೀರಿ ಅಂತ ಹೇಳಿದ್ದಾರೆ. ಅವರಿಗೆ ಹೆಂಡತಿ ಇಲ್ಲ, ಮನೆಯಲ್ಲಿರಲ್ಲ. ನಮಗೆ ಹೆಂಡತಿ ಇದ್ದಾರೆ ನಾವು ಮನೆಯಲ್ಲಿ ಇರ್ತೀವಿ. ಶುಕ್ರವಾರ, ಶನಿವಾರ ಆದ ಮೇಲೆ ಸನ್ ಡೇ ತೆಗೆದು ಹಾಕಿಬಿಡಿ. ಸಾಟರ್ ಡೇ ಬದಲು ಸ್ಟೇರ್ ಡೇ ಅಂತ ಇಟ್ಕೋಬಿಡಿ ಅಂತ ಹೇಳಿದ್ದಾರೆ.

ರಾಜಕಾರಣವನ್ನ ಬಹಳಷ್ಟು ಜನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಪರಿಣಾಮ ನಾವು ಈ ಸ್ಥಿತಿ ತಲುಪಿದ್ದೇವೆ. ಭವಿಷ್ಯದ ಇತಿಹಾಸ ಬರೆಯುವಾಗ ತಪ್ಪು ಮಾಡಿದವರನ್ನ ಬರೆಯ ಬಹುದೇನೋ. ಆದರೆ ಮೌನವಾಗಿದ್ದವರನ್ನ ಯಾರೂ ಬರೆಯುವುದಿಲ್ಲ. ದೇಶಕ್ಕೆ ಅರಣ್ಯ, ಭೂಮಿ ರೀತಿ ರಂಗಾಯಣ ಕೂಡ ಮುಖ್ಯ. ಕೆಲವರು ಇತಿಹಾಸವನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.












