ಇಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ಹದಿನೈದು ಸಮಾಜದ ಪ್ರಮುಖರಿಗೆ ಅವಕಾಶ ನೀಡಲಾಗಿದೆ ಎಂದು ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಹದಿನೈದು ವಿವಿಧ ಸಮಾಜದ ಮುಖಂಡರು, ಪ್ರಮುಖರು ಪ್ರಧಾನಿ ಸ್ವಾಗತ ಮಾಡಿಕೊಳ್ಳಲಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿಕೊಳ್ಳಲಿದ್ದಾರೆ. ನಾಳಿನ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಅಧಿಕ ಜನರನ್ನ ಸೇರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಬೆಳಗಾವಿ ಗ್ರಾಮೀಣ, ದಕ್ಷಿಣ, ಉತ್ತರ ಕ್ಷೇತ್ರದಿಂದಲೇ ಒಂದು ಲಕ್ಷ ಜನರನ್ನ ಸೇರಿಸುತ್ತೇವೆ. ಇಂದು ರಾತ್ರಿ ಪ್ರಧಾನಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡುತ್ತಾರೆ ಅಷ್ಟೆ. ಯಾವುದೇ ಸಭೆ, ನಾಯಕರ ಭೇಟಿ ನಿಗದಿಯಾಗಿಲ್ಲ.

ಬೆಳಗಾವಿಯಲ್ಲಿ ಪ್ರಚಾರಕ್ಕೆ ನಟಿ ಮಾಧವಿ ಲತಾ ಅವರನ್ನು ಕರೆತರಲು ಮಹಿಳಾ ಬಿಜೆಪಿ ಕಾರ್ಯಕರ್ತರ ಬೇಡಿಕೆ ಇದೆ. ತೆಲಂಗಾಣ ನಾಯಕರ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.