ಮುಖದ ಅಂದವನ ಹೆಚ್ಚಿಸುವಲ್ಲಿ ಕಣ್ಣಿನ ಪಾತ್ರ ಮಹತ್ವದ್ದು ಕಣ್ಣನ್ನ ನೋಡ್ತಾ ಇದ್ದಂತೆ ಮತ್ತೊಬ್ಬರ ಒಳ ಮನಸು ಅರ್ಥವಾಗುತ್ತದೆ. ಕೆಲವರಿಗೆ ತಮ್ಮ ಮುಖಕ್ಕಿಂತ ಕಣ್ಣುಗಳು ಅದ್ಭುತವಾಗಿರುತ್ತವೆ. ಹೀಗೆ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಹೆಚ್ಚು ಜನ ಹೆಣ್ಣುಮಕ್ಕಳು ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ.ಕಾಡಿಗೆಯನ್ನು ಹಚ್ಚುವುದು ಸುಲಭ ಆದರೆ ತೆಗೆಯುವುದು ತುಂಬಾನೇ ಕಷ್ಟಕರ. ತೆಗೆಯುವಾಗ ಸ್ವಲ್ಪ ಆಚೆ ಈಚೆ ಆದ್ರೂ ಕಣ್ಣಿನ ಸುತ್ತ ಕಪ್ಪಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ನ ಹೇಗೆ ತೆಗೆಯುವುದು ಅನ್ನೋದರ ಟಿಪ್ಸ್ ಇಲ್ಲಿದೆ.

ಹಾಲು
ಕಣ್ಣಿಗೆ ಹಚ್ಚಿರುವಂತ ಕಾಡಿಗೆಯನ್ನು, ಹಾಲನ್ನ ಬಳಸಿ ಸುಲಭವಾಗಿ ತೆಗೆಯಬಹುದು, ಒಂದು ಬೌಲಿಗೆ ಎರಡು ಟೇಬಲ್ ಸ್ಪೂನ್ ನಷ್ಟು ಹಾಲನ್ನು ಹಾಕಿ, ಅದರ ಒಳಗೆ ಒಂದು ಕಾಟನ್ ಬಾಲ್ ಅನ್ನ ಅದ್ದಿ, ನಂತರ ನಿಧಾನವಾಗಿ ಆ ಕಾಟನ್ನಿಂದ ಕಣ್ಣಿಗೆ ಹಚ್ಚಿರುವ ಕಾಜಲನ್ನು ಒರೆಸಬೇಕು. ಇದರಿಂದ ತಕ್ಷಣಕ್ಕೆ ಕಾಜಲ್ ಹೋಗುತ್ತದೆ. ಕಣ್ಣಿಗೆ ಹಾಲನ್ನ ಬಳಸುವುದರಿಂದ ಒಳ್ಳೆಯ ಹೈಡ್ರೇಶನ್ ದೊರೆಯುತ್ತದೆ.

ವೆಟ್ ವೈಪ್
ಮನೆಯಲ್ಲಿ ಅಥವಾ ಕಾರಿನಲ್ಲಿ ಬ್ಯಾಗಿನಲ್ಲಿ ಮಹಿಳೆಯರು ಅಂತೂ ವೆಟ್ ವೈಪ್ ಅನ್ನ ಇಟ್ಟುಕೊಂಡಿರುತ್ತಾರೆ. ಕಣ್ಣಿಗೆ ಕಾಜಲ್ ಹಚ್ಚಿದ್ದು ಕಿರಿಕಿರಿ ಎನಿಸಿದಾಗ ,ಎಲ್ಲಿದ್ದರೂ ಕೂಡ ವೆಟ್ ವೈಪ್ ಬಳಸಿ ನಿಧಾನವಾಗಿ ಒರೆಸುವುದರಿಂದ ಕಣ್ಣಿನ ಕಾಜಲ್ ನೀಟಾಗಿ ಹೋಗುತ್ತದೆ.

ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆ
ಕೊಬ್ಬರಿ ಎಣ್ಣೆಯನ್ನು ಕಣ್ಣಿನ ಸುತ್ತ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ .ನಂತರ ಒಂದು ಬಟ್ಟೆ ಅಥವಾ ಕಾಟನ್ ನಿಂದ ಒರೆಸುವುದರಿಂದ ಕಣ್ಣಿನ ಕಾಜಲ್ ನಿವಾರಣೆಯಾಗುತ್ತದೆ. ಕೊಬ್ಬರಿ ಎಣ್ಣೆ ಬದಲಿಗೆ ಆಲಿವ್ ಎಣ್ಣೆಯನ್ನು ಕೂಡ ನೀವು ಬಳಸಬಹುದು. ಇದರಿಂದ ಕಣ್ಣಿನ ಕಪ್ಪು ಕಲೆಗಳು ಕಡಿಮೆಯಾಗುತ್ತದೆ ಹಾಗೂ ಮೊಯಿಶ್ಚರೈಸ್ ಮಾಡಿದಂತಾಗುತ್ತದೆ.

ಪೆಟ್ರೋಲಿಯಂ ಜೆಲ್ಲಿ
ಸುಲಭವಾಗಿ ಕಣ್ಣಿನ ಕಾಜಲ್ ತೆಗೆದು ಹಾಕಬಹುದು .ಬೆರಳುಗಳ ಸಹಾಯದಿಂದ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ನು ತೆಗೆದುಕೊಂಡು, ನಿಧಾನವಾಗಿ ನಿಮ್ಮ ಕಣ್ಣಿನ ಕಾಜಲನ್ನು ಬಳಿ ಹಚ್ಚಿ 10 ಸೆಕೆಂಡ್ ಹಾಗೆ ಬಿಟ್ಟು ನಂತರ ಒಂದು ಕಾಟನ್ ನಿಂದ ಕಣ್ಣನ್ನ ವೈಫ್ ಮಾಡುವುದರಿಂದ ಕ್ಲಿಯರ್ ಆಗುತ್ತದೇ.












