ವಿಶ್ವದ ಅತಿದೊಡ್ಡ ಪ್ರಜಾಪಭುತ್ವ (Democracy) ಭಾರತ (india) ಮತ್ತೊಂದು ಹಬ್ಬಕ್ಕೆ ಸಿದ್ಧವಾಗ್ತಿದೆ. ಪ್ರಜಾಪ್ರಭುತ್ವದ ಹಬ್ಬ ಅಂದ್ರೆ ಅದು ಚುನಾವಣೆ. 15/03/2024 ಶುಕ್ರವಾರದಂದು ಕೇಂದ್ರ ಚುನಾವಣ ಆಯೋಗ (central election commision) ದೇಶದಾದ್ಯಂತ ಲೋಕಸಭೆ ಚುನಾವಣೆಯ(parliment election) ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ದೇಶದಾದ್ಯಾಂತ ಲೋಕಸಭೆ ಚುನಾವಣೆ ಕಾವು ಹೆಚ್ಚಾಗಿದ್ದು, ಚುನಾವಣೆ ದಿನಾಂಕ ಅಧಿಕೃತ ಘೋಷಣೆಯಾದ ನಂತರ ರಾಷ್ಟ್ರ ರಾಜಕಾರಣ ಇನ್ನಷ್ಟು ಬಿರುಸುಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ !

ನೀರಿಕ್ಷೆ ಇದ್ದಂತೆ ಇಷ್ಟೊತ್ತಿಗಾಗ್ಲೇ ದೇಶದಲ್ಲಿ ಚುನಾವಣೆಯ (election dates) ದಿನಾಂಕಗಳು ಘೋಷಣೆಯಾಗಬೇಕಿತ್ತು. ಆದ್ರೆ ಚುನಾವಣ ಆಯೋಗದ ತಯಾರಿಗಳು (election commisiion) ಮುಗಿದ ನಂತರವೇ ಇದೀಗ ಆಯೋಗವೂ ಕೂಡ ದಿನಾಂಕ ಘೋಷಣೆಗೆ ಸಜ್ಜಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ , ಕೆಲವೊಂದಷ್ಟು ಕ್ಷೇತ್ರಗಳಿಗೆ ಮಾತ್ರ ಇನ್ನೂ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದ್ದು ಉಳಿದಂತೆ ಎಲ್ಲಾ ತಯಾರಿ ಮಾಡಿಕೊಂಡು ಅಭರ್ಥಿಗಳೂ ಕೂಡ ಈಗಾಘಲೇ ಮಾನಸೀಕವಾಗಿ ಚುನಾವಣೆಗೆ ಸಿದ್ಧವಾಗಿದ್ದಾರೆ.

ಚುನಾವಣಾ ಆಯೋದಲ್ಲಿ (election ommission) ಎರೆಡು ಆಯುಕ್ತರ ಸ್ಥಾನ ಖಾಲಿ ಇದ್ದದ್ದು ಕೂಡ , ಆಯೋಗದ ತಯಾರಿಗಳಿಗೆ ಕೊಂಚ ಸಮಯ ಹಿಡಿಯಿತು ಎನ್ನಲಾಗ್ತಿದ್ದು, ಇದೀಗ ಆಯೋಗದ ತಯಾರಿ ಪೂರ್ಣಗೊಂಡಂತಿದೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದಂತ ಅರುಣ್ ಗೋಯೆಲ್ (arun goyel) ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು.


