ತುಮಕೂರು (Tumkur constituency) ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ . ಬಿಜೆಪಿಯಿಂದ ವಿ.ಸೋಮಣ್ಣ(V.somanna) ಅಭ್ಯರ್ಥಿ ಎಂದು ಘೋಷಣೆಯಾದ ನಂತರ, ಮಾಜಿ ಸಚಿವ ಮಾಧುಸ್ವಾಮಿ (Maadhuswamy) ತೀವ್ರ ಅಸಮಾಧಾನಗೊಂಡಿದ್ದರು. ನಂತರ ಸ್ವತಃ ಬಿಎಸ್ ಯಡಿಯೂರಪ್ಪ (BS Yediyurappa) ಮಾಧುಸ್ವಾಮಿಯವರ ಮನವೊಲಿಸಿ ಅಸಮಾಧಾನವನ್ನು ಶ್ರಮನ ಮಾಡಿದ್ರು . ಆದ್ರೆ ಇಷ್ಟಕ್ಕೂ ಮಾಧುಸ್ವಾಮಿಯವರ ಅಸಮಾಧಾನ ತಣ್ಣಗಾಗಿರಲಿಲ್ಲ.
ಬಿಎಸ್ ಯಡಿಯೂರಪ್ಪ ತುಮಕೂರಿಗೆ ಬಂದು ಮಾತುಕತೆ ನಡೆಸಿ ಹೋದ ನಂತರ ಎಲ್ಲವೂ ಸರಿ ಹೋಗಿದೆ . ನಾನು ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ ಎಂದು ಖುದ್ದು ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದರು . ಆದ್ರೆ ನಿನ್ನೆ ಮೊನ್ನೆಯ ಬೆಳವಣಿಗೆಗಳು ಬೇರೆ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡ ,ಇತ್ತೀಚಿಗೆ ಮಾಧುಸ್ವಾಮಿಯವರ ನಿವಾಸಕ್ಕೆ ಭೇಟಿಕೊಟ್ಟು ಕೆಲಕಾಲ ಇಬ್ಬರು ನಾಯಕರು ಚರ್ಚೆ ಮಾಡಿದ್ದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪ್ರತಿಕ್ರಿ ಸಿದ್ದ ಮಾತು ಸ್ವಾಮಿ ಅಭ್ಯರ್ಥಿಯಾಗಿರುವವರು ಬಂದಮೇಲೆ ಬೆಂಬಲ ಕೇಳದೆ ಇರ್ತಾರ ? ಇನ್ನೇನು ಕಡ್ಲೆಪುರಿ ತಿನ್ನೋದಕ್ಕೆ ನಮ್ಮ ನಿವಾಸಕ್ಕೆ ಬಂದಿದ್ರಾ ಅಂತ ಹೇಳಿದ್ರು . ಇದೀಗ ಖುದ್ದು ಗೃಹ ಸಚಿವ ಜಿ ಪರಮೇಶ್ವರ್( Dr.G.Parameshwar) ಮಾಧುಸ್ವಾಮಿ ಕಾಂಗ್ರೆಸ್ ಗೆ (Congress) ಬರೋದಾದ್ರೆ ನಾನೇ ಅವರನ್ನು ಸ್ವಾಗತ ಮಾಡ್ತೀನಿ ಎಂದು ಹೇಳೋದರ ಮೂಲಕ, ಅಧಿಕೃತವಾಗಿ ಕಾಂಗ್ರೆಸ್ ಮಾಧುಸ್ವಾಮಿಯವರಿಗೆ ಗಾಳ ಹಾಕಿದೆ .ಒಂದು ವೇಳೆ ಬಿಜೆಪಿ ತೊರೆದು ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಆದ್ರೆ ತುಮಕೂರಿನಲ್ಲಿ ಬಿಜೆಪಿಗೆ ಇದು ಅತಿ ದೊಡ್ಡ ಹೊಡೆತವಾಗುವುದರಲ್ಲಿ ಸಂಶಯವೇ ಇಲ್ಲ.