ಈ ಹಿಂದೆ ಟಿಟಾಗಢ್ ವ್ಯಾಗನ್ಸ್ ಎಂದು ಕರೆಯಲ್ಪಡುವ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಹಾಗೂ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಒಕ್ಕೂಟವು ಭಾರತೀಯ ರೈಲ್ವೆಗೆ 80 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸುವ 24 ಸಾವಿರ ಕೋಟಿ ರೂಪಾಯಿ ಮೌಲ್ಯದ ಆರ್ಡರ್ನ್ನು ಪಡೆದುಕೊಂಡಿದೆ . ಆರ್ಡರ್ ಪಡೆದ ಎರಡೂ ಕಂಪನಿಗಳು 2029ರ ವೇಳೆಗೆ ಸಂಪೂರ್ಣವಾಗಿ ಜೋಡಿಸಲಾದ ರೈಲುಗಳನ್ನು ತಯಾರಿಸಿ ಕೊಡಬೇಕು ಹಾಗೂ ಮುಂದಿನ 35 ವರ್ಷಗಳ ಕಾಲ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಕಂಪನಿಗಳೇ ಹೊರಬೇಕು ಎಂದು ತಿಳಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳ ಅಂತಿಮ ಜೋಡಣೆ, ಪರೀಕ್ಷೆ ಮತ್ತು ಕಾರ್ಯಾರಂಭಕ್ಕೆ ಭಾರತೀಯ ರೈಲ್ವೆಯ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತೆ. ಪ್ರತಿ ರೈಲು 16 ಕೋಚ್ಗಳನ್ನು ಹೊಂದಿರುತ್ತದೆ. ಈ ರೈಲಿನಲ್ಲಿ ಒಟ್ಟು 880 ಪ್ರಯಾಣಿಕರು ಏಕ ಕಾಲದಲ್ಲಿ ಪ್ರಯಾಣಿಸಬಹುದಾಗಿದೆ. ಈ ರೈಲುಗಳು ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತವೆ.
DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್
"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....
Read moreDetails






