ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರೇ ನಮ್ಮ ಹುಲಿ. KRS ಅಣೆಕಟ್ಟು ಕಟ್ಟಿದ್ದಾರೆ. ಬೆಂಗಳೂರಿಗೆ ಕರೆಂಟ್ ಕೊಟ್ಟಿದ್ದಾರೆ ಅವರೇ ಎಂದಿಂಗೂ ನಮ್ಮ ಹುಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಕೈಬಿಟ್ಟ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು. ಹುಲಿ ಎಂದಿಗೂ ಬೋನಿನಲ್ಲಿ ಸಾಯುವುದಿಲ್ಲ . ಟಿಪ್ಪು ಸುಲ್ತಾನ್ ಯುದ್ದ ಮಾಡದೆ ಸಂಧಾನಕ್ಕೆ ಕಳುಹಿಸಿದ್ದ . ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು ? ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ಹುಲಿ ಅಂದರು. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ . ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣರಾಜ ಒಡೆಯರ್. ನಾಲ್ವಡಿ ಕೃಷ್ಣರಾಜ ಒಡೆಯರ್ KRS ಅಣೆಕಟ್ಟು ಕಟ್ಟಿದ್ದಾರೆ. ಅವರೇ ಎಂದಿಂಗೂ ನಮ್ಮ ಹುಲಿ. ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ಕೋಟೆಯೊಳಗೆ ಸತ್ತಿದ್ದಾನೆ. ಪೋಸ್ಟ ರ್ಗಳಲ್ಲಿ ಹುಲಿ ಚಿತ್ರ ಹಾಕಿ ಬಿಟ್ಟರೆ ಹುಲಿ ಆಗಿಬಿಡ್ತಾನಾ? ಎಂದು ಪ್ರ ಶ್ನೆ ಮಾಡಿದರು.