ಚಿಕ್ಕಬಳ್ಳಾಪುರ:ನೀರಿನ ಹೊಂಡದಲ್ಲಿ ಬಿದ್ದು ಮೂವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.ಓರ್ವ ಯುವತಿ ಹಾಗೂ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರದ ಕಂಬತ್ತನಹಳ್ಳಿ ಗ್ರಾಮದಲ್ಲಿ ರಂಜಿತ್ (27), ಅಭಿಲಾಷ್ (21) ಹಾಗೂ ರಮ್ಯ (24) ಮೃತ ದುರ್ದೈವಿಗಳು.
ರಂಜನ್ ಯಲಹಂಕ ನಿವಾಸಿ ಸುಬ್ರಮಣಿ ಎಂಬುವರ ಮಗನಾಗಿದ್ದು, ಅಭಿಲಾಷ್ ಬೆಂಗಳೂರಿನ ಕಿತ್ತಗಾನಹಳ್ಳಿ ನಿವಾಸಿ ಲಕ್ಷ್ಮಿನಾರಾಯಣಪ್ಪ ಅವರ ಮಗನಾಗಿದ್ದಾನೆ.ಬೆಂಗಳೂರಿನ ಕಮ್ಮತ್ತನಹಳ್ಳಿ ನಿವಾಸಿ ನಾಗಭೂಷಣ ಅವರ ಪುತ್ರಿ ರಮ್ಯಾ ಕೂಡ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದ ಯುವಕ ಯುವತಿಯರು, ಈಜಲು ಹೋಗಿದ್ದ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.