ಕಿರುತೆರೆ ನಟಿ ದೀಪಿಕಾ ದಾಸ್ ತಾಯಿಗೆ ನಿನ್ನೆ (ನ.27) ಮಧ್ಯರಾತ್ರಿ ವ್ಯಕ್ತಿಯೊಬ್ಬ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದುಡ್ಡಿಗಾಗಿ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ದೀಪಿಕಾ ದಾಸ್ ಅವರ ತಾಯಿ ಪದ್ಮ ಲತಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯಶವಂತ್ ಎಂಬ ವ್ಯಕ್ತಿ ಪದ್ಮಲತಾ ಅವರಿಗೆ kare ಮಾಡಿ, ಅವರ ಅಳಿಯ ಅಂದ್ರೆ ದೀಪಿಕಾ ದಾಸ್ ಗಂಡನ ಬಗ್ಗೆ ಆರೋಪಗಳನ್ನು ಮಾಡಿದ್ದಾನೆ. ಅವರು ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿ ಹಣ ಮಾಡಿದ್ದಾರೆ. ನಂಗೆ ಹಣ ಕೊಡಿ, ಇಲ್ಲದಿದ್ರೆ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಈ ವಿಚಾರ ಹೇಳುವುದಾಗಿ ಬೆದರಿಕೆ ಹಾಕಿದ್ದಾನೆ.
ಒಂದುವೇಳೆ ಹಣ ಕೊಡದಿದ್ದರೆ, ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧಮ್ಕಿ ಹಾಕಿದ್ದಾನೆ. ಹೀಗಾಗಿ ಈ ಬಗ್ಗೆ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ಈ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದು ತನಿಖೆ ಚುರುಕುಗೊಂಡಿದೆ.