ಪೋಸ್ಟ್ ಕಾರ್ಡ್ ಹಾಗೂ ಟಿವಿ ವಿಕ್ರಮ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಹಾಕಿ, ಅವರ ಮಗಳ ಬಗ್ಗೆ ಅತ್ಯಂತ ಕೀಳಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಟಿವಿ ವಿಕ್ರಮ್ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ದೂರುದಾರ ಸುರೇಶ್ ಬಾಬು ಮತ್ತು ಅವರ ಮಗಳ ಬಗ್ಗೆ ಮಾನಹಾನಿಯಾಗುವ ಬಗ್ಗೆ ಮಹೇಶ್ ವಿಕ್ರಮ್ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುರೇಶ್ ಬಾಬು ಅವರಿಗೆ ಕರೆ ಮಾಡಿ ನಾವು ಸೌಜನ್ಯಳನ್ನೇ ಬಿಟ್ಟಿಲ್ಲ. ಅಂತಹ ಕಟೀಲ್ ಕೈನಲ್ಲೂ ಏನೂ ಮಾಡಲು ಆಗಿಲ್ಲ. ಇನ್ನು ನೀನು ಏನ್ ಕಿತ್ಕೊಳ್ತಿಯಾ? ಎಂದು ಮಹೇಶ್ ವಿಕ್ರಮ್ ಹೆಗಡೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಹೇಳಳಾಗಿದೆ.
“ನಿನ್ನ ಮಗಳು ನಾರಾಯಣ ಸ್ವಾಮಿ ಜೊತೆ ಮಲಗಿದ್ದಾಳೆ ಅಂತ ಒಪ್ಪು” ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ ಎಂದೆಲ್ಲಾ ಬೆದರಿಕೆ ಹಾಕಿದ್ದು, ನಿನ್ನ ಮಗಳು ರೂಮಿನಲ್ಲಿಯೇ ಇದ್ದಾಳ ನೋಡು ಎಂದು ಕಾಮೆಂಟ್ ಕೂಡಾ ಹಾಕಿರುವ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ.
ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರದಾರ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.