
ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆ ಚಾರಣಕ್ಕೆ ಹೋಗಿದ್ದ ನಾಲ್ವರು ಚಾರಣಿಗರು ಸಾವನ್ನಪ್ಪಿದ್ದಾರೆ. ಚಾರಣಕ್ಕೆ ಹೋಗಿದ್ದ 20 ಕನ್ನಡಿಗರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರು ಕನ್ನಡಿಗರ ಮೃತದೇಹವನ್ನು ರಾಜ್ಯಕ್ಕೆ ತರಲು ಸಿದ್ದರಾಮಯ್ಯ ಸರ್ಕಾರದ ಶತಪ್ರಯತ್ನ ನಡೆಸಿದೆ. ಕನ್ನಡಿಗರ ರಕ್ಷಣೆ, ಮೃತದೇಹ ತರಲು ಸಚಿವ ಕೃಷ್ಣಬೈರೇಗೌಡ ದೌಡಾಯಿಸಿದ್ದಾರೆ. ಉತ್ತರಾಖಂಡ ಸರ್ಕಾರದ ಜೊತೆ ಮಾತುಕತೆ ನಡೆಸಿರುವ ಸಚಿವ ಕೃಷ್ಣಬೈರೇಗೌಡ, ಡೆಹ್ರಾಡೂನ್‌ನಲ್ಲಿ ಅಧಿಕಾರಿಗಳ ಜೊತೆ ಸಚಿವ ಕೃಷ್ಣಬೈರೇಗೌಡ ಮಾತುಕತೆ ನಡೆಸಿದ್ದಾರೆ.

ಹವಾಮಾನ ವೈಪರೀತ್ಯದಿಂದ ಉತ್ತರಾಖಂಡದ ಶಾಸ್ತ್ರತಾಳದಲ್ಲಿ ಚಾರಣಕ್ಕೆಂದು ತೆರಳಿದ್ದ 9 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಕನ್ನಡಿಗರು ಐವರು ಸೇರಿದ್ದಾರೆ. ಚಾರಣಿಕರ ಮೃತದೇಹಗಳನ್ನು ಸೇನಾ ಹೆಲಿಕಾಪ್ಟರ್ಗಳ ಮೂಲಕ ರವಾನೆ ಮಾಡಲಾಗಿದೆ. 20 ಜನರ ಪೈಕಿ ರಕ್ಷಣೆಗೊಳಗಾದ 8 ಚಾರಣಿಗರನ್ನು ಡೆಹ್ರಾಡೂನ್ನ ರಾಜ್ಯ ಅತಿಥಿ ಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಉತ್ತರಾಖಂಡದ ಶಾಸ್ತ್ರತಾಳ್ನಲ್ಲಿ ಹವಾಮಾನ ವೈಪರೀತ್ಯದಿಂದ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕನ್ನಡಿಗರ ರಕ್ಷಣೆಗಾಗಿ ಸಚಿವ ಕೃಷ್ಣ ಭೈರೇಗೌಡ ಉತ್ತರಾಖಂಡ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಚಾರಣಿಗರ ರಕ್ಷಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್‌ಗೆ ತೆರಳಿ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಸಿಎಂ ಜೊತೆ ದೂರವಾಣಿ ಸಂಪರ್ಕದಲ್ಲಿ ಮಾತನಾಡಿದ್ದು, ತುರ್ತಾಗಿ ಮೃತದೇಹಗಳನ್ನ ಹಾಗೆ ರಕ್ಷಿಸಲ್ಪಟ್ಟ ಚಾರಣಿಕರನ್ನ ರಾಜ್ಯಕ್ಕೆ ವಾಪಸ್ ತರಲು ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೃತದೇಹಗಳನ್ನ ಕುಟುಂಬದವರಿಗೆ ಹಸ್ತಾಂತರಿಸುವ ಭರವಸೆ ಕೊಟ್ಟಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯರಿಂದ ವಿವರಣೆ ನೀಡಿದ್ದು, ಚಾರಣಿಗರ ಸುರಕ್ಷಿತ ರಕ್ಷಣೆ ಮತ್ತು ಮೃತ ದೇಹಗಳನ್ನು ರಾಜ್ಯಕ್ಕೆ ತುರ್ತಾಗಿ ತರಲು ಅಗತ್ಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಗೆ ದೂರವಾಣಿ ಮೂಲಕ ಸಿಎಂ ಸೂಚನೆ ಕೊಟ್ಟಿದ್ದು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಕೃಷ್ಣಮಣಿ