ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರುತ್ತಿದೆ. 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಪಕ್ಷದ ನಾಯಕರು, ಮುಖಂಡರು ರಾಜ್ಯದ ಮೂಲೆ ಮೂಲೆಗೂ ತಿರುಗಿ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ್ನಾಡಿದ ಕೆ.ಎಸ್.ಈಶ್ವರಪ್ಪ, ʻವರುಣಾದ ಸಿದ್ದರಾಮನಹುಂಡಿಯಲ್ಲಿ ನಡೆದ ಘಟನೆ ಕಾಂಗ್ರೆಸ್-ಬಿಜೆಪಿ ನಡುವೆ ನಡೆದ ಘಟನೆ ಅಲ್ಲ. ಅದು ಕಾಂಗ್ರೆಸ್ ಗೂಂಡಾಗಿರಿ ಎಂದರು. ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರದ ವೇಳೆ ಮನೆ ಮನೆಗೆ ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಕಿಡಿಗೇಡಿಗಳು ಬಕೆಟ್ ನಲ್ಲಿ ಕಲ್ಲು ತಡೆದುಕೊಂಡು ಬಂದು ಹೊಡೆದಿದ್ದಾರೆ. ಈಗಾಗಲೇ ಈ ಕುರಿತು ಪೊಲೀಸ್ ದೂರು ದಾಖಲಾಗಿದೆ. ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿಸುತ್ತಿದೆ. ಜನರ ಮನಸ್ಸಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಹೇಳಿಕೆಗಳು ತುಂಬಾ ನಿಕೃಷ್ಟವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಗೂಂಡಾಗಿರಿ ನಿಲ್ಲಿಸಬೇಕು. ಇಲ್ಲವಾದರೆ ಬಿಜೆಪಿ ತಕ್ಕ ಉತ್ತರ ಕೊಡುತ್ತದೆ ಅಂತ ಹೇಳಿದ್ರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ವಿಷ ಸರ್ಪದ ಹೋಲಿಕೆ ತೀರಾ ಕನಿಷ್ಠ ಹಾಗೂ ಖರ್ಗೆ ಈ ತರಹ ಮಾತನಾಡಿದ್ದಾರಾ ಎಂಬ ಅನುಮಾನ ನನಗೆ ಬಂತು ಎಂದು ಈಶ್ವರಪ್ಪ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದೆ ಸ್ಥಾನದಲ್ಲಿ ಇಟ್ಟಿದ್ದೆವು. ಕಾಂಗ್ರೆಸ್ ಪಕ್ಷದ ಹೀರೋ ಅಂದುಕೊಂಡಿದ್ದೆ ಆದರೆ ಜನಸಾಮಾನ್ಯರಿಗೆ ವಿಲನ್ ಆಗಿದ್ದಾರೆ. ಇಂತಹ ನೀತಿಗೆಟ್ಟ ಮಾತನ್ನು ಆಡುತ್ತಾರೆ ಎಂದು ನಾವು ನಂಬಿರಲಿಲ್ಲ. ನರೇಂದ್ರ ಮೋದಿ ಅವರು ಕೊರೋನಾ ಹಾಗೂ ಯುದ್ಧ ಸಮಯದಲ್ಲಿ ನಡೆದುಕೊಂಡ ರೀತಿಗೆ ಪ್ರಪಂಚವೇ ಶ್ಲಾಘಿಸಿದೆ. ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಎಂದು ಹೇಳಿಕೆ ನೀಡಿರುವುದು ದುರದೃಷ್ಟಕರ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮೆಚ್ಚಿಸಿ ಅಧ್ಯಕ್ಷ ಗಾದಿ ಹಿಡಿದ ಮಲ್ಲಿಕಾರ್ಜುನ ಖರ್ಗೆ ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ. ಹೇಳಿಕೆ ನೀಡಿ, ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಬಿಡಿ ಎಂದು ಹೇಳಲು ಸಾಧ್ಯವಿಲ್ಲ. ನಾವು ಕೂಡ ಹಾಗೆ ಮಾಡಬಹುದಾ ಅವರು ರಾಷ್ಟ್ರೀಯ ನಾಯಕರಾಗಿರುವುದೇ ದುರಂತ. ಕಾಂಗ್ರೆಸ್ ಪಕ್ಷಕ್ಕೂ ಕೂಡ ಅವಮಾನ. ಈಗಾಗಲೇ ಪಕ್ಷ ಎಲ್ಲೆಡೆ ನಿರ್ನಾಮ ಆಗಿದೆ ಇಲ್ಲೂ ಕೂಡ ನಿರ್ನಾಮವಾಗುತ್ತದೆ. ಬಾಯಿಗೆ ಬಂತು ಎಂದು ಹೇಳುವುದು ಬಾಲಿಶ, ಖರ್ಗೆ ಅವರಿಗೆ ಮೌಲ್ಯ ಇತ್ತು ನರೇಂದ್ರ ಮೋದಿಯವರನ್ನ ಟೀಕೆ ಮಾಡುವವರು ಯಾರು ಉದ್ದಾರ ಆಗೋದಿಲ್ಲ. ಮೋದಿಗೆ ಸಹಕಾರ ಕೊಡಿ, ದೇಶ ನಡೆಸಲು ಅನುಕೂಲವಾಗುವುದು ಎಂದರು.
ರಾಷ್ಟ್ರ ನಾಯಕರು ಹುಬ್ಬಳ್ಳಿಗೆ ಬಂದು ನನ್ನನ್ನು ಸೋಲಿಸಲು ಪಣತೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಎಲ್ಲರೂ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಅಮಿತ್ ಶಾ, ನಡ್ದಾ, ಸಂತೋಷ್ ಜೀ, ಎಲ್ಲರೂ ಕೂಡ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಮಾತ್ರ ಭ್ರಮೆಯಲ್ಲಿದ್ದಾರೆ. ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಮಾತ್ರ ನಾವು ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳೋದಕ್ಕೆ ಶೆಟ್ಟರ್ ಏನು ಇಂಟರ್ನ್ಯಾಷನಲ್ ಲೀಡರ್..? ಎಂದು ಈಶ್ವರಪ್ಪ ಪ್ರಶ್ನಿಸಿದರು. ಏಕವಚನದಲ್ಲಿ ಸಂಬೋಧಿಸಿ, ನಿನ್ನ ಎಲ್ಲಿ ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಆದರೂ ಸಹ ಬೆಲೆ ಕೊಡಲಿಲ್ಲ. ಹುಬ್ಬಳ್ಳಿಯೇನೂ ಪಾಕಿಸ್ತಾನ ಅಲ್ಲ. ಎಲ್ಲಾ ಕಡೆ ಪ್ರಚಾರ ಮಾಡುವಂತೆ ಅಲ್ಲೂ ಮಾಡುತ್ತಿದ್ದೇವೆ. ಹುಬ್ಬಳ್ಳಿ ರಾಜ್ಯದ ಒಂದು ಅಂಗ ಅಷ್ಟೇ ಎಂದರು. ನಾನು ಮುಸ್ಲಿಂ ವೋಟ್ ಗಳು ಬೇಡ ಎಂದಿಲ್ಲ. ಆದರೆ ರಾಷ್ಟ್ರ ದ್ರೋಹಿ ಮುಸಲ್ಮಾನ ವೋಟುಗಳು ಬೇಡ ಎಂದಿದ್ದೇನೆ ಅಷ್ಟೇ. ಪ್ರತಿ ಪತ್ರಿಕಾಗೋಷ್ಠಿಯಲ್ಲಿ ನಾನಿದನ್ನ ಹೇಳಿದ್ದೇನೆ. ರಾಷ್ಟ್ರದ್ರೋಹಿ ಮುಸಲ್ಮಾನರನ್ನ ನಾನು ಯಾವಾಗಲೂ ದೋಷಿಸುತ್ತೇನೆ ಅಂತ ಕೆ.ಎಸ್.ಈಶ್ವರಪ್ಪ ಹೇಳಿದ್ರು.