ಬೆಂಗಳೂರಿನಲ್ಲಿ ಯಾವ ಟೈಂಗೆ ವೆದರ್ ಹೇಗಿರುತ್ತೆ ಅನ್ನೋದು ಗೊತ್ತಾಗೋದಿಲ್ಲ. ಬಿಸಿಲಿರುತ್ತೆ ಸಡನ್ ಆಗಿ ಮಳೆ ಬರುತ್ತೆ. ಈ ರೀತಿ ಇರುವಾಗ ಮುಂದಿನ ಚಳಿಗಾಲ ಮಾತ್ರ ಜನರಿಗೆ ಸಿಕ್ಕಾಪಟ್ಟೆ ಥಂಡಿಯಾಗಲಿದ್ಯಂತೆ. ಮಳೆಯಿಂದ ಇನ್ನೂ ಜನರು ಸಹಜ ಸ್ಥಿತಿಯತ್ತ ಬರೋ ಮೊದಲೇ ಚಳಿಗಾಲದ ಎಫೆಕ್ಟ್ ಕಾಡಲಿದೆ.
ಮಳೆಗಾಲ ಮುಗಿತಿದ್ದಂತೆ, ಚಳಿಗಾಲಕ್ಕೆ ರೆಡಿಯಾಗ್ಬೇಕಿದೆ ಬೆಂಗಳೂರು.!!
ಸದ್ಯ ಬೆಂಗಳೂರಿನ ಪರಿಸ್ಥಿತಿ ಹೇಗಿದೆ ಅಂತ ಗೊತ್ತಿದೆ. ಅಕ್ಟೋಬರ್ ವರೆಗೂ ಕೂಡಾ ವರುಣ ಬೆಂಗಳೂರಿಗರಿಗೆ ಬಿಡದೆ ಕಾಡ್ತಾನೆ. ಇದರ ಜೊತೆಗೆ ಈ ಮಳೆಗಾಲದಲ್ಲೂ ಬೆಳಗ್ಗೆ ಬಿಸಿಲು ಸಂಜೆ ಚಳಿ ಹಾಗೂ ಮಳೆಯ ವೆದರ್‌ಗೆ ಜನರು ಅಡ್ಜೆಸ್ಟ್ ಆಗ್ಬೇಕಿದೆ. ಹೀಗಿರುವಾಗ ಮಳೆಗಾಲ ಮುಗಿದ ತಕ್ಷಣವೇ ಜನರು ಚಳಿಗಾಲಕ್ಕೆ ರೆಡಿಯಾಗ್ಬೇಕಿದೆ.
ಈ ಬಾರಿ ಚಳಿಗಾಲದಲ್ಲಿ ಜನರಿಗೆ ಕಾಡಲಿದೆ ಶೀಥದ ಗಾಳಿ. ಮಾನ್ಸೂನ್‌ನಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ, ಮುಂದಿನ ನವೆಂಬರ್‌ನಲ್ಲಿ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಉಷ್ಣಾಂಶ ಕಡಿಮೆಯಾಗಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಈ ರೀತಿ ಆಗೋದ್ರಿಂದ ನವೆಂಬರ್‌ನಲ್ಲಿ ಆರಂಭವಾಗುವ ಚಳಿಗಾಲವು ಅಕ್ಟೋಬರ್ ಅಂತ್ಯದಲ್ಲೇ ಶುರುವಾಗಿ ಹೆಚ್ಚು ದಿನಗಳ ಕಾಲ ಇರಲಿದ್ಯಂತೆ. ಕಳೆದ ವರ್ಷ ಹೆಚ್ಚು ಚಳಿ ಬೆಂಗಳೂರಿಗರಿಗೆ ಬಾಧಿಸಲಿಲ್ಲ. ಕಳೆದ ವರ್ಷ ಚಳಿಯ ಪ್ರಮಾಣ ಶೆ.12 ಡಿಗ್ರಿ ಸೆಲ್ಸಿಯಸ್ ಇತ್ತು.

ಕಳೆದ 5 ವರ್ಷದಿಂದಲೂ ಕೂಡಾ ಹೆಚ್ಚು ಚಳಿ ಇರಲಿಲ್ಲ. ಆದ್ರೆ ಈ ಬಾರಿ 5 ವರ್ಷಕ್ಕೂ ಹೋಲಿಸಿದ್ರೆ ಹೆಚ್ಚು ಚಳಿಯು ಮೈಕೊರೆಸುವಂತೆ ಮಾಡಲಿದ್ಯಂತೆ. ಈ ವರ್ಷ 8 ಡಿಗ್ರಿ ಸೆಲ್ಸಿಯಸ್‌ವರೆಗೂ ಥಂಡಿ ಇರಲಿದೆ ಎಂದು ಪ್ರಿಡಿಕ್ಷನ್ ಮಾಡಿದ್ದು, ಹವಮಾನ ಬದಲಾವಣೆ ವಿಜ್ಞಾನಿ ರಾಜೇಗೌಡ ಮಾಹಿತಿ ನೀಡಿದ್ದಾರೆ.
5 ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಹೆಚ್ಚು ಥಂಡಿ ಬೆಂಗಳೂರಿಗೆ ಕಾಡಲಿದೆ. ಈಗಾಗಲೇ ಮಳೆಯ ಶಾಕ್‌ನಿಂದ ಇನ್ನೂ ಸಿಲಿಕಾನ್ ಸಿಟಿ ಜನರು ಹೊರ ಬಂದಿಲ್ಲ. ಹೀಗಿರುವಾಗ್ಲೇ ಚಳಿಗಾಲಕ್ಕೂ ಕೂಡಾ ಜನರು ಮೆಂಟಲಿ ಹಾಗೂ ಫಿಸಿಕಲಿ ಪ್ರಿಪೇರ್ ಆಗಬೇಕಿದೆ ಎಂದಿದ್ದಾರೆ. ಒಟ್ನಲ್ಲಿ ಮಳೆಯ ಪರಿಣಾಮದಿಂದಲೇ ಬೆಂಗಳೂರಿನ ಜನರು ಇನ್ನೂ ಹೊರ ಬಂದಿಲ್ಲ. ಹೀಗಿರುವಾಗ ಈ ಬಾರಿ ಚಳಿ ಕೂಡಾ ಜನರಿಗೆ ಶಾಕ್ ನೀಡ್ತಿದ್ದು, ಆದಷ್ಟರ ಮಟ್ಟಿಗೆ ಚಳಿಗಾಲಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳಬೇಕಿದೆ.






