ಒಂದಲ್ಲ..ಎರಡಲ್ಲ..18 ವರ್ಷಗಳ ಕಪ್ ಗೆಲ್ಲುವ ಕನಸು ಕೊನೆಗೂ ನನಸಾಗಿದೆ. ಹೌದು ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2025 ರ (ipl 2025) ಕಪ್ ತನ್ನದಾಗಿಸಿಕೊಂಡಿದೆ. ಇದೇ ಜೋಶ್ ನಲ್ಲಿ ರಾಜ್ಯಾದ್ಯಂತ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಆರ್.ಸಿ.ಬಿ ಅಭಿಮಾನಿಗಳು ರಾತ್ರಿಯಿಡಿ ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋಡು ಸ್ಟೇಡಿಯನ್ ನಲ್ಲಿ ನಡೆದ ಪಂಜಾಬ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಆರ್.ಸಿ.ಬಿ ಆಟಗಾರರು ಪಂಜಾಬ್ ಗುರಿ ಮುಟ್ಟದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರ್.ಸಿ.ಬಿ ಕಪ್ ಗೆಲ್ಲುತ್ತಿದ್ದಂತೆ ಕಿಂಗ್ ಕೊಹ್ಲಿ ಭಾವುಕರಾಗಿದ್ದಾರೆ.

ಇಂದು ಐಪಿಎಲ್ ಕಟ್ ಜೊತೆಗೆ ಇಡೀ ತಂಡ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯನ 3:30 ರ ನಂತರ ಬೆಂಗಳೂರಲ್ಲಿ ಕಪ್ ಹಿಡಿದು ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭಕ್ಕಾಗಿ ಕಾತರರಾಗಿರುವ ಫ್ಯಾನ್ಸ್, ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ.
ಕಳೆದ 18 ಸೀಸನ್ ಗಾಕಿಂದ ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳು .. ಈ ಸಲ ಕಪ್ ನಮ್ದು ಅಂತ ಟ್ಯಾಗ್ ಲೈನ್ ಬದಲಿಸಿ ಖುಷಿ ಪಡುತ್ತಿದ್ದು, ಆರ್.ಸಿ.ಬಿ ಅಭಿಮಾನಿಗಳ ಕಪ್ ಬರ ನೀಗಿದಂತಾಗಿದೆ.