ನವದೆಹಲಿ :ಏ.೧೦: ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಇನ್ನೂ ಏಕೆ ಮೀನಮೇಷ ಎಣಿಸುತ್ತಿದೆ, ಇದಕ್ಕೆ ಕಾರಣ ಏನಿರಬಹುದು, ಕೇಂದ್ರ ನಾಯಕರಲ್ಲಿ ಅಂತಹ ಭಯ ಏನಿದೆ ಅನ್ನುವ, ಹತ್ತಾರು ಪ್ರಶ್ನೆಗಳಿಗೆ ತುಂಬಾ ಸುಲಭವಾಗಿ ಉತ್ತರ ಹೇಳುವುದಾದರೆ, ಮೊದಲನೆಯದಾಗಿ ರಾಜ್ಯ ಬಿಜೆಪಿಯಲ್ಲಿ ಹಲವಾರು ಶಾಸಕರು ಈ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಇದ್ದಾರೆ ಇದರಲ್ಲಿ ೧೭ ಜನರಿಗೆ ಈ ಬಾರಿ ಟಿಕೆಟ್ ಕೊಡುವುದಿಲ್ಲ ಅನ್ನೋ ಸುದ್ದಿ ದೊಡ್ಡಮಟ್ಟದಲ್ಲಿ ಓಡಾಡುತ್ತಿದೆ. ಒಂದು ಕಡೆ ಕುಟುಂಬ ರಾಜಕಾರಣದ ಬಗ್ಗೆ ವಿರೋಧ ಮಾಡುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ದೊಡ್ಡ ಬಿರುಗಾಳಿ” ಎದ್ದಿದೆ. ಹಲವಾರು ಶಾಸಕರು ತಮ್ಮ ಮಕ್ಕಳಿಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

ಮತ್ತೊಂದು ಕಡೆ ನಾಲ್ಕಾರು ಬಾರಿ ಶಾಸಕರು ಆಗಿರುವ ಕಡೆ ಅಭಿವೃದ್ಧಿಯ ಕಡೆಗಣನೆ ಹೇಳಿಕೊಳ್ಳುವುದಕ್ಕೆ ಡಬಲ್ ಇಂಜಿನ್ ಸರ್ಕಾರ.. ಹೆಸರಿಗೆ ಮಾತ್ರ ಅಷ್ಟೇ, ಅಂತ ಜನತೆಗೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡೇ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವ ಇವರು, ಕಾರ್ಯಕರ್ತ ಪಕ್ಷ ನಮ್ದು ಅಂತ ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ. ಇದೇ ಕಾರಣಗಳಿಂದ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಬಾರಿ ಹೊಡೆತ ಬೀಳುವ ಲಕ್ಷಣಗಳು ಕಾಣುತ್ತಿದೆ.