ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಕಾರಣವಾದ ವಿಮಾನ ದುರಂತದ ತನಿಖೆಯ ಬಗ್ಗೆ ಅಜಿತ್ ಪವಾರ್ ಅವರ ಪುತ್ರ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಎಸ್ಪಿ ಶಾಸಕ ರೋಹಿತ್ ಪವಾರ್ ಮಂಗಳವಾರ ಪ್ರಶ್ನೆ ಮಾಡಿದ್ದಾರೆ.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ರೋಹಿತ್ ಪವಾರ್, ದುರದೃಷ್ಟಕರ ಅಪಘಾತ ಸಂಭವಿಸಿ 20 ದಿನಗಳು ಕಳೆದರೂ ತನಿಖೆ ಯಾವುದೇ ಮಹತ್ವದ ಅಂಶವನ್ನು ಹೊರಹಾಕಿಲ್ಲ.20 ದಿನಗಳ ವಿಳಂಬವು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂದು ಪ್ರಶ್ನೆ ಮಾಡಿದ್ದಾರೆ.

ವಿಎಸ್‌ಆರ್ ಕಂಪನಿಯು ಸಾಕ್ಷ್ಯವನ್ನು ನಾಶಮಾಡಲು ವಿಳಂಬ ಮಾಡುತ್ತಿದೆಯೇ? ದಾದಾ ಪ್ರಕರಣದಲ್ಲಿ ಇದು ಅಪಘಾತವೋ ಅಥವಾ ಕೊಲೆಯೋ ಎಂಬುದಕ್ಕೆ ಉತ್ತರ ಸಿಗುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದ್ದಾರೆ.






