ಬೆಂಗಳೂರು: Banglore ಸದರ್ ಪತ್ರಪ್ಪ ರಸ್ತೆಯ ಮಾರುಕಟ್ಟೆಗೆ (ಎಸ್.ಪಿ ರಸ್ತೆ) ವಿಶ್ವದ ‘ಕುಖ್ಯಾತ ಮಾರುಕಟ್ಟೆ‘ ಎಂಬ ಗರಿ ಮೂಡಿದೆ !!
ಅಮೆರಿಕದ (America) ಸರ್ಕಾರಿ ಸ್ವಾಮ್ಯದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆ ಬಿಡುಗಡೆ ಮಾಡಿರುವ 2023ರ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
2023ರಲ್ಲಿನ ವಿಶ್ವದ ಕುಖ್ಯಾತ 39 ಆನ್ಲೈನ್ ಮಾರ್ಕೆಟ್ ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿ ಪ್ರಕಟಿಸಿದ್ದು, ಈ ಮಾರುಕಟ್ಟೆಗಳು ನಕಲಿ ಟ್ರೇಡ್ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ತೊಡಗಿವೆ ಎಂದು ಹೇಳಿದೆ.
ಮುಂಬೈನ ಹೀರಾ ಪನ್ನಾ ಮಾರುಕಟ್ಟೆ, ಕೋಲ್ಕತ್ತಾದ ಕಿಡ್ಡರ್ಪೋರ್ ಮಾರುಕಟ್ಟೆ, ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಈ ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಇ–ಕಾಮರ್ಸ್ ಉದ್ಯಮ ಇಂಡಿಯಾ ಮಾರ್ಟ್, ವೆಗಾಮೂವೀಸ್, ಡಬ್ಲ್ಯುಎಚ್ಎಂಸಿಎಸ್ ಸ್ಟಾಟರ್ಸ್ ಕೂಡ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯಲ್ಲಿವೆ.
ಕೋಲ್ಕತ್ತಾದ ಕಿಡ್ಡರ್ಪೋರ್ ಮಾರುಕಟ್ಟೆ, ಮುಂಬೈನ ಹೀರಾ ಪನ್ನಾ, ನವದೆಹಲಿಯ ಕರೋಲ್ ಬಾಗ್ನಲ್ಲಿರುವ ಟ್ಯಾಂಕ್ ರಸ್ತೆ ಹಾಗೂ ಬೆಂಗಳೂರಿನ ಸದರ್ ಪತ್ರಪ್ಪ ರಸ್ತೆ ಮಾರುಕಟ್ಟೆ ಪಟ್ಟಿಯಲ್ಲಿರುವ ಭಾರತೀಯ ಮಾರುಕಟ್ಟೆಗಳಾಗಿವೆ.
ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ನಕಲಿ ಮತ್ತು ದರೋಡೆ ಸರಕುಗಳ ವ್ಯಾಪಾರವು ಕಾರ್ಮಿಕರು, ಗ್ರಾಹಕರು ಹಾಗೂ ಸಣ್ಣ ವ್ಯವಹಾರಗಳಿಗೆ ಹಾನಿ ಮಾಡುತ್ತದೆ. ಅಂತಿಮವಾಗಿ ಯುಎಸ್ ಆರ್ಥಿಕತೆಗೆ ಹಾನಿ ಮಾಡುತ್ತದೆ” ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.ಈ ವರ್ಷದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಮಹತ್ವದ್ದಾಗಿದೆ. ಏಕೆಂದರೆ, ಇದು ನಕಲಿ ಸರಕುಗಳ ಸಂಭಾವ್ಯ ಅಪಾಯಗಳನ್ನು ಒತ್ತಿ ಹೇಳುತ್ತದೆ” ಎಂದು ಅವರು ಹೇಳಿದರು.
ಇದು ಚೀನಾ–ಆಧಾರಿತ ಇ–ಕಾಮರ್ಸ್ ಮತ್ತು ವಾಣಿಜ್ಯ ಮಾರುಕಟ್ಟೆಗಳಾದ ಟಾವೊಬಾವೊ, ವಿಚಾಟ್, ಡಿಎಚ್ಗೇಟ್, ಪಿಂಡೂಡುವೋ ಈ ಪಟ್ಟಿಯಲ್ಲಿವೆ. ಚೀನಾ ಕುಖ್ಯಾತ ಮಾರುಕಟ್ಟೆಗಳನ್ನು ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ.
ಇತರ ಪಟ್ಟಿ ಮಾಡಿದ ಮಾರುಕಟ್ಟೆಗಳಲ್ಲಿ ಚೀನಾದಲ್ಲಿ ಏಳು ಭೌತಿಕ ಮಾರುಕಟ್ಟೆಗಳು ಸೇರಿವೆ. ಇದು ನಕಲಿ ಸರಕುಗಳ ತಯಾರಿಕೆ, ವಿತರಣೆ ಮತ್ತು ಮಾರಾಟಕ್ಕೆ ಹೆಸರುವಾಸಿಯಾಗಿದೆ.
ಯುಎಸ್ಟಿಆರ್ 2006ರಲ್ಲಿ ಮೊದಲ ಬಾರಿಗೆ ವಿಶೇಷ 301 ವರದಿಯಲ್ಲಿ ಕುಖ್ಯಾತ ಮಾರುಕಟ್ಟೆಗಳನ್ನು ಗುರುತಿಸಿದೆ. ಫೆಬ್ರವರಿ 2011ರಿಂದ, ಯುಎಸ್ಟಿಆರ್ ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಮತ್ತು ಮಾರುಕಟ್ಟೆ ನಿರ್ವಾಹಕರು ಮತ್ತು ಸರ್ಕಾರಗಳು ಯುಎಸ್ ಅನ್ನು ರಕ್ಷಿಸುವ ಬೌದ್ಧಿಕ ಆಸ್ತಿ ಜಾರಿ ಪ್ರಯತ್ನಗಳಿಗೆ ಆದ್ಯತೆ ನೀಡಲು, ಪ್ರತ್ಯೇಕವಾಗಿ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ವಾರ್ಷಿಕವಾಗಿ ಪ್ರಕಟಿಸಿದೆ. ವಿಶ್ವದಲ್ಲೇ ನಕಲಿ ಉತ್ಪನ್ನಗಳ ಮೊದಲ ಮೂಲವಾಗಿ ಚೀನಾ ಮುಂದುವರಿದಿದೆ ಎಂದು ವರದಿ ಹೇಳುತ್ತದೆ.
#Markets #Banglore #Americansurvey