ಭವಿಷ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಅದೇ ರೀತಿ ಮಹಿಳೆಯರೂ ಸುಂದರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದರೆ ಮಹಿಳೆಯರಿಗೆಂದೇ ಹೇಳಿ ಮಾಡಿಸಿದ ಎಲ್ಐಸಿ ಯೋಜನೆಯೊಂದಿದೆ. ಪ್ರತಿನಿತ್ಯ ನೀವು 58 ರೂಪಾಯಿ ಹೂಡಿಕೆ ಮಾಡಿದರೆ ಸಾಕು ಕೊನೆಯಲ್ಲಿ ನೀವು 8 ಲಕ್ಷ ರೂಪಾಯಿ ಪಡೆಯಬಹುದಾಗಿದೆ.
ಆಧಾರ್ ಶೀಲಾ ಪಾಲಿಸಿ ಎಂದು ಈ ಯೋಜನೆಗೆ ಹೆಸರಿಡಲಾಗಿದೆ. ಈ ಪಾಲಿಸಿ ಅನುಸಾರ ನೀವು ದಿನಕ್ಕೆ ಕೇವಲ 58 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. 8 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಈ ಯೋಜನೆಯಲ್ಲಿ ಭಾಗಿಯಾಗುವ ಅವಕಾಶವಿದೆ.
ಆಧಾರ್ ಶೀಲಾ ಪಾಲಿಸಿಯ ಪಾಲಸಿದಾರ ಮಹಿಳೆಯು ಪಾಲಿಸಿ ಅವಧಿ ಮುನ್ನವೇ ಮರಣವನ್ನು ಹೊಂದಿದ್ದರೆ ಅಥವಾ ಮೆಚುರಿಟಿ ಅವಧಿ ಪೂರ್ಣಗೊಳಿಸಿದರೆ ಮೊತ್ತವನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಪಾಲಿಸಿಯಿಂದ ನೀವು ಸಾಲ ಸೌಲಭ್ಯ ಕೂಡ ಪಡೆಯಬಹುದು. ಉದಾಹರಣೆಗೆ ಓರ್ವ ಮಹಿಳೆ ತನ್ನ 30 ವರ್ಷ ಪ್ರಾಯದಲ್ಲಿ ಎಲ್ಐಸಿ ಯೋಜನೆ ಆರಂಭಿಸಿದಂತೆ ಒಂದು ವರ್ಷದಲ್ಲಿ 21 ಸಾವಿರದ 918 ರೂಪಾಯಿ ಸಂಗ್ರಹಿಸುತ್ತಾರೆ.20 ವರ್ಷದ ಬಳಿಕ ಈ ಮೊತ್ತ 4,29,392 ರೂಪಾಯಿ ಆಗುತ್ತದೆ. ಬಡ್ಡಿಯೆಲ್ಲ ಸೇರಿ 7,94,000 ರೂಪಾಯಿ ಮಹಿಳೆಗೆ ಸಿಗುತ್ತದೆ. ಗರಿಷ್ಠ 20 ವರ್ಷದವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.