ಇಂದು ದಾಖಲೆಯ 16 ನೇ ಬಜೆಟ್ (16th budget) ಮಂಡಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (Cm siddaramaiah)ರಾಜ್ಯದ ಆರ್ಥಿಕ ಶಿಸ್ತಿನ ದಾಖಲೆಯನ್ನು ಮುರಿದು, ಅತ್ಯಂತ ಹೆಚ್ಚು ಸಾಲ ಮಾಡಿದ ದಾಖಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿರುವ ಸಿಎಂಸಿದ್ದರಾಮಯ್ಯ, ಅತಿ ಹೆಚ್ಚು ಸಾಲ ಮಾಡಿದ ದಾಖಲೆ ಬರೆದಿದ್ದು, ಆದಾಯದಲ್ಲಿ ಪ್ರತಿಶತ 27 ಸಾಲ , ವೆಚ್ಚದಲ್ಲಿ ಪ್ರತಿಶತ 18 ಬಡ್ಡಿ ವ್ಯಯ ಅಂತ ಸಿಟಿ ರವಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು “ಸಾಲದ” ಬಜೆಟ್ ಎಂದಿರುವ ಸಿಟಿ ರವಿ, ರಾಜ್ಯ ಕಾಂಗ್ರೆಸ್ ಸರ್ಕಾರದ 2025-26 ನೇ ಸಾಲಿನ ಬಜೆಟ್ ಅಂಶಗಳನ್ನು ಟೀಕಿಸಿದ್ದಾರೆ. ಕಳೆದ ಬಾರಿಗಿಂತಲೂ ಬಜೆಟ್ ನ ಗಾತ್ರ ಹೆಚ್ಚಾಗಿದ್ದರೂ, ಸಾಲಾದ ಪ್ರಮಾಣವು ಕೂಡ ಅಷ್ಟೇ ಹೆಚ್ಚಾಗಿದೆ.