ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ಕಾಲ್ತುಳಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ (Bengaluru) ಕೇಂದ್ರ ಸಚಿವ ವಿ.ಸೋಮಣ್ಣ (V somanna) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದು ಲಜ್ಜೆಗೇಡಿ ಸರ್ಕಾರ.. ಒಂದು ವಾರಬಿಟ್ಟು ಕಾರ್ಯಕ್ರಮ ಮಾಡಿದ್ದರೆ ಇವರ ಗಂಟು ಏನು ಹೋಗ್ತಿತ್ತು.ಇವರು ಯಾರು ಹೇಳಿದ್ರೂ ಕೇಳಲಿಲ್ಲ.ಈ ವಿಚಾರದಲ್ಲಿ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಕಿವಿ ಯಾರು ಕಚ್ಚಿದ್ರೋ, ಕಾರ್ಯಕ್ರಮ ಮಾಡಲೇಬೇಕು ಅಂದ್ರೋ ಅವರ ಮೇಲೆ ಕ್ರಮ ಆಗಿಲ್ಲ.ಅನಾಥ ಕುಟುಂಬಳಿಗೆ ಇದು ಶಾಪಗ್ರಸ್ಥ ಸರ್ಕಾರವಾಗಿದೆ. ಇಂಥ ಕೆಲಸ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ವಿ ಸೋಮಣ್ಣ ಜರಿದಿದ್ದಾರೆ.

ಸಿಎಂ ಸಿದ್ದರಾಮಯ್ಯನವ್ರ ಅನುಭವ ಎಲ್ಲೋಯ್ತು ?ದಕ್ಷ ಅಧಿಕಾರಿಗೆ ನೋವು ಕೊಟ್ಟಿದ್ದೀರಾ.ಆ ಕುಟುಂಬಗಳಿಗೆ ಏನೂ ಕೊಡೋಕೆ ಆಗಲ್ಲ. ಸರ್ಕಾರವನ್ನ ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಅಂತಾ ಆತುರಪಟ್ಟರು. ಆದ್ರೆ ಇದು ಸರ್ಕಾರಕ್ಕೆ ಕೊಡಲಿ ಪೆಟ್ಟು..ಅಕ್ಷಮ್ಯ ಅಪರಾಧ ಮಾಡಿದ್ದೀರಿ ಎಂದು ಸಿಎಂ, ಡಿಸಿಎಂ ವಿರುದ್ಧ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.











