ಭಾರತ ಪಾಕ್ ವಿರುದ್ಧ ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಸೂರ್ಯಕುಮಾರ್ ಮಾತನಾಡಿ ಹೇಳಿದ್ದೇನು ? ಆಟದ ಬಗ್ಗೆ ಕ್ಯಾಪ್ಟನ್ ಮಾತು ಹೀಗಿದೆ

ನಾವು ಯಾವ ರೀತಿ ಆಡಬೇಕು ಎಂದುಕೊಂಡಿದ್ದೇವು ಅದೇ ರೀತಿ ಅದೇ ಮಾದರಿ ಆಡಿದ್ದೇವೆ. ಪಂದ್ಯದ ಆರಂಭದಲ್ಲಿ ಟಾಸ್ ಹಾಕುವಾಗ ಟಾಸ್ ಗೆದ್ದಿದ್ದರೆ ನಾವು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದೇವು. ಅದರಂತೆ ನಮಗೆ ಬ್ಯಾಟಿಂಗ್ ಮೊದಲು ಸಿಕ್ಕಿರುವುದು ಒಳ್ಳೆಯದೇ ಆಯಿತು. ಈ ದಿನ ಈ ಗೆಲುವು ಭಾರತಕ್ಕಾಗಿ ಎಂದು ನಾನು ಹೇಳುತ್ತೇನೆ.

ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಒಳ್ಳೆಯದು.2ನೇ ಬ್ಯಾಟಿಂಗ್ನಲ್ಲಿ ಗೆಲುವು ತುಂಬಾ ಕಷ್ಟ ಎನ್ನಬಹುದು. ಏಕೆಂದರೆ ಆಗ ತಾನೆ ಇಬ್ಬನಿ ಬೀಳುತ್ತಿರುತ್ತದೆ. ಮತ್ತು ಬೆಳಕು ಸ್ವಲ್ಪವಾದರೂ ಇರುತ್ತದೆ. 155 ರನ್ ಗುರಿ ತಲುಪುವುದು ಇಲ್ಲಿ ತುಂಬಾ ದೊಡ್ಡ ಸವಾಲು. ಆದರೂ ನಾವು 176 ರನ್ ಟಾರ್ಗೆಟ್ ನೀಡಿದ್ದರಿಂದ ಅಂದುಕೊಂಡಿದ್ದಕ್ಕಿಂತ 15 ರಿಂದ 20 ರನ್ ಹೆಚ್ಚಾಗಿ ಇತ್ತು. ನಾವು ಮೊದಲೇ ಅಂದುಕೊಂಡಂತೆ ಇಲ್ಲಿ ಆಡಿದ್ದೇವೆ ಎಂದು ಭಾರತದ ನಾಯಕ ಹೇಳಿದ್ದಾರೆ.

ಹಾಗಾಗಿ ನಿನ್ನೆ ಗೆಲುವಿಗೆ ಮುಖ್ಯವಾಗಿ ಭಾರತ ಮೊದಲು ಬ್ಯಾಟ್ ಮಾಡಿದ್ದೇ ಮುಖ್ಯ ಕಾರಣವಾಗಿದೆ. ಪಾಕ್ ಟಾಸ್ ಗೆದ್ದರೂ ಮೊದಲು ತಾನು ಬಾಲಿಂಗ್ ಆಯ್ಕೆ ಮಾಡಿಕೊಂಡಿದ್ದೇ ಭಾರತಕ್ಕೆ ಗೆಲುವಿನ ಮೆಟ್ಟಿಲಾಗಿದೆ.






