ಮೈಸೂರು:ವಿವಾಹ ಪೂರ್ವ ಫೋಟೋ ಶೂಟ್ ನೆಪದಲ್ಲಿ ಫೋಟೋಗ್ರಾಫರ್ ನನ್ನು ಕರೆಸಿದ ಕಳ್ಳನೊಬ್ಬ 8 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಕ್ಯಾಮೆರಾ ಕದ್ದು ಎಸ್ಕೇಪ್ ಆಗಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಣೇಶ್ ಎಂದು ಹೆಸರಿನೊಂದಿಗೆ ಪರಿಚಯಿಸಿಕೊಂಡ ಕಳ್ಳನು ನಾನು ನಿಮ್ಮ ಇನ್‌ಸ್ಟಾಗ್ರಾಮ್ ಫ್ರೋಪೈಲ್ ನೋಡಿದ್ದೇನೆ ತುಂಬಾ ಚೆನ್ನಾಗಿ ಫೋಟೋ ಶೂಟ್ ಮಾಡುತ್ತೀರ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಮೈಸೂರು ಸಮೀಪದ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋ ಗ್ರಾಫರ್‌ಗೆ ಕರೆ ಮಾಡಿದ್ದಾನೆ. ಬಳಿಕ 75,000 ರೂ.ಗೆ ಫೋಟೋ ಶೂಟ್ ಮಾಡಿಕೊಡಬೇಕೆಂದು ಅಗ್ರಿಮೆಂಟ್ ಕೂಡ ಮಾಡಿಸಿಕೊಂಡಿದ್ದಾನೆ. ಇದಕ್ಕೆ ಮುಂಗಡ ಎಂದು 2,000 ರೂಪಾಯಿ ಹಣವನ್ನು ಆನ್‌ಲೈನ್‌ನಲ್ಲಿ ಗಣೇಶ್ ವರ್ಗಾವಣೆ ಸಹ ಮಾಡಿದ್ದಾನೆ.
ನಂತರ ಮೊನ್ನೆ ಮೈಸೂರಿಗೆ ಫೋಟೋಗ್ರಾಫರ್ ಭಾರ್ಗವ್‌ನನ್ನ ಕರೆಸಿದ್ದಾನೆ. ತಾನು ಮೊದಲೇ ಬುಕ್ ಮಾಡಿದ ಲಾಡ್ಜ್‌ನ ರೂಂ ನಲ್ಲಿಯೇ ಕೆಲಸ ಮುಗಿಯುವವರೆಗೂ ಉಳಿಯುವಂತೆ ಹೇಳಿದ್ದಾನೆ. ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ ಎಂದು ಹೇಳಿ ಅವರ ನಂಬರ್ ಕೊಟ್ಟಿದ್ದಾನೆ.
ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ ಎಂದು ಹೇಳಿ ಅವರ ನಂಬರ್ ಕೊಟ್ಟಿದ್ದಾನೆ. ಅವರ ಜೊತೆ ಊಟ ಮಾಡಿಕೊಂಡು ಫೋಟೋ ಶೂಟ್‌ಗೆ ಒಳ್ಳೇ ಲೊಕೇಷನ್ ತೋರಿಸಿ ಎಂದು ಭಾರ್ಗವ್ ನನ್ನು ಹೊರಗಡೆ ಕಳಿಸಿದ್ದಾನೆ. ದೇವರಾಜ ಮಾರುಕಟ್ಟೆಗೆ ಅವನು ಹೇಳಿದ ಸ್ಥಳಕ್ಕೆ ಹೋದಾಗ ಇವನು ನೀಡಿದ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪುನಃ ಗಣೇಶ್ ನಿಗೆ ಕರೆ ಮಾಡಿದಾಗ ಇವನೂ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೂಡಲೇ ಗಾಬರಿಯಲ್ಲಿ ಲಾಡ್ಜ್ ಬಂದು ನೋಡಿದಾಗ ಕಳ್ಳ 8 ಲಕ್ಷ ರೂಪಾಯಿ ಬೆಲೆಯ ಕ್ಯಾಮೆರಾದೊಂದಿಗೆ ಪರಾರಿ ಆಗಿರುವುದು ಬೆಳಕಿಗೆ ಬಂತು. ಸದ್ಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.