ಎರಡು ದಶಕಗಳ ಬಳಿಕ ಅಫ್ಘನಿನಲ್ಲಿ ತಾಲಿಬಾನ್ ಮತ್ತೆ ಮೇಲುಗೈ ಸಾಧಿಸಿಕೊಂಡಿದೆ. ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆಯೇ ಅಂತರ್ಯುದ್ಧದಲ್ಲಿ ತೊಡಗಿದ ತಾಲಿಬಾನ್, ಅಮೆರಿಕಾದ ಸೇನೆ ಸಂಪೂರ್ಣವಾಗಿ ಅಫ್ಘನ್‌ನನ್ನು ತೊರೆಯುವ ಮೊದಲೇ ದೇಶದ ರಾಜಧಾನಿಯನ್ನು ತಾಲಿಬಾನ್ ತನ್ನ ವಶ ಪಡೆದುಕೊಂಡಿದೆ. ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ನಮ್ಮ ಯುದ್ಧ ಮುಗಿಸುತ್ತೇವೆ, ಶಾಂತಿ ಸ್ಥಾಪಿಸುತ್ತೇವೆ ಎಂದು ತಾಲಿಬಾನ್ ಹೇಳಿಕೊಂಡರೂ ತಾಲಿಬಾನ್ ಆಡಳಿತದಲ್ಲಿ ಇರಲು ಇಚ್ಛಿಸದ ಸಾವಿರಾರು ಅಫ್ಘನ್ ನಾಗರಿಕರು ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ, ನಿರಾಶ್ರಿತರಾಗಿ ಆಶ್ರಯ ಹುಡುಕುತ್ತಾ ಅಲೆದಾಡುತ್ತಿದ್ದಾರೆ.
ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಕೆಲವು ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂತಹ ಕೆಲವು ಚಿತ್ರಗಳು ಇಲ್ಲಿವೆ.