• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಹಳ ದೊಡ್ಡ ಅನಾಹುತ ಆಗಬೇಕಿತ್ತು ; ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿದ್ದೇನೆ ; ಡಿಕೆ ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
May 2, 2023
in Top Story, ಇತರೆ / Others, ಇದೀಗ, ಕರ್ನಾಟಕ, ದೇಶ
0
ಬಹಳ ದೊಡ್ಡ ಅನಾಹುತ ಆಗಬೇಕಿತ್ತು ; ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿದ್ದೇನೆ ; ಡಿಕೆ ಶಿವಕುಮಾರ್
Share on WhatsAppShare on FacebookShare on Telegram

ಕೋಲಾರ: ಬೆಂಗಳೂರಿನ ಜಕ್ಕೂರಿನಿಂದ ಮುಳಬಾಗಿಲಿಗೆ ಬರಬೇಕಾದ್ರೆ ದೊಡ್ಡ ಹದ್ದು ಬಂದು ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆಯಿತು. ಹೆಲಿಕಾಪ್ಟರ್ ನ ಗ್ಲಾಸ್ ಎಲ್ಲಾ ಒಡೆದು ಹೋಗಿದೆ. ಬಹಳ ದೊಡ್ಡ ಅನಾಹುತ ಆಗಬೇಕಿತ್ತು. ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ADVERTISEMENT

ರಾಜ್ಯದ ಜನರ ಪ್ರೀತಿ ವಿಶ್ವಾಸದಿಂದ ಇಂದು ಜೀವಂತವಾಗಿದ್ದೇನೆ:
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಪರ ನಗರದಲ್ಲಿ ಬೃಹತ್ ರೋಡ್ ಶೋ ಮೂಲಕ ಡಿಕೆ ಶಿವಕುಮಾರ್ ಮತಯಾಚನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ಬರುತ್ತಿದ್ದೆ. 7-8 ನಿಮಿಷ ಹೆಲಿಕಾಪ್ಟರ್ ನಲ್ಲಿ ಪ್ರಯಾಣವೂ ಮಾಡಿದ್ದೆ. ಆದರೆ ಅಷ್ಟರಲ್ಲಿ ಹೆಲಿಕಾಪ್ಟರ್ ಗೆ ದೊಡ್ಡದಾದು ಹದ್ದು ಡಿಕ್ಕಿ ಹೊಡೆದಿದೆ. ಆಗ ಹೆಲಿಕಾಪ್ಟರ್ ನ ಗ್ಲಾಸ್ ಎಲ್ಲಾ ಒಡೆದು ಹೋಯಿತು. ಬಹಳ ದೊಡ್ಡ ಅನಾಹುತ ಆಗಬೇಕಿತ್ತು. ರಾಜ್ಯದ ಜನರ ಪ್ರೀತಿ, ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿ ನಾನು ಮುಳಬಾಗಿಲಿಗೆ ಬಂದಿದ್ದೇನೆ. ಸಮಯ ಪ್ರಜ್ಞೆಯಿಂದ ಪೈಲಟ್ ತುರ್ತು ಭೂ ಸ್ಪರ್ಷ ಮಾಡಿದ್ದಾರೆ. ಇಂತಹ ಘಟನೆ ನಡೆದಿದ್ದರೂ ಧೈರ್ಯ ತೆಗೆದುಕೊಂಡು ಮುಳಬಾಗಿಲಿಗೆ ಬಂದಿದ್ದೇನೆ. ಯಾರೂ ಗಾಬರಿ ಪಡುವಂತಹ ಅವಶ್ಯಕತೆ ಇಲ್ಲ. ಭಗವಂತ ನಮ್ಮ ಕಡೆ ಇದ್ದಾನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಅವರು ಶಾಂತಿ ಕದಡುತ್ತಿದ್ದಾರೆ, ನಾವು ಶಾಂತಿ ಮೂಡಿಸುತ್ತೇವೆ:
ಇನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಮಾಡುತ್ತಾರೆಂಬ ವಿಷಯಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಕಾನೂನು ಸುವ್ಯವಸ್ಥೆಯನ್ನು ಅವರು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅವರು ಶಾಂತಿಯನ್ನು ಕದಡಿಸುತ್ತಿದ್ದಾರೆ. ಆದ್ರೆ ನಾವು ಶಾಂತಿ ಮೂಡಿಸಬೇಕಾಗಿದೆ. ಅವರು ಯಾವುದೇ ಪಕ್ಷದಲ್ಲಿರಲಿ ನಮಗೆ ಅಭ್ಯಂತರ ಇಲ್ಲ. ಅನೇಕ ಕಡೆ ಇ‌ಂದು ಕಾನೂನಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ ಎಂದರು.

ಡಿಕೆಶಿ ಇದ್ದ ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದಿದ್ದ ಹದ್ದು:
ಇಂದು ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆ ಶಿವಕುಮಾರ್‌ ಚುನಾವಣಾ ಪ್ರಚಾರಕ್ಕಾಗಿ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್‌ ಟೇಕಾಫ್‌ ಆಗಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನು ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್‌ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಎಚ್ಚೆತ್ತ ಪೈಲಟ್‌ ಎಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಡಿಕೆ ಶಿವಕುಮಾರ್‌ ಕಾರಿನ ಮೂಲಕ ಮುಳಬಾಗಿಲು ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು.

Tags: BajarangadalBJPBJP GovernmentDKShivakumarHelicopterKPCC president
Previous Post

ಮಾತಿನಿಂದ ಕೆಟ್ಟಿದ್ದ ಜೆಡಿಎಸ್​ ಬುದ್ಧಿ ಕಲೀತು.. ಕಾಂಗ್ರೆಸ್​ ಹಳೇ ಚಾಳಿ ಮುಂದುವರಿಸಿತು..

Next Post

ʻಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆʼ: ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ..!

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
Next Post
ʻಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆʼ: ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ..!

ʻಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆʼ: ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada