ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಸೀಸಬನ್ 11ರಲ್ಲಿ ಜಗದೀಶ್ ಅವರ ವರ್ತನೆ ಬಗ್ಗೆ ವೀಕ್ಷಕರು ಅಸಮಾಧನ ಹೊರ ಹಾಕುತ್ತಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ ಜಗದೀಶ್ ಕೂಗಾಟಕ್ಕೆ ಬಿಗ್ ಬಾಸ್ ಎಷ್ಟೇ ಪ್ರಯತ್ನಿಸಿದರೂ ಆಗುತ್ತಲೇ ಇರಲಿಲ್ಲ.
ಹೀಗಿರುವಾಗ ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಂಜಿತ್ ಹಾಗೂ ಜಗದೀಶ್ ಇಬ್ಬರೂ ಮನೆಯಿಮದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆಯ ಸಂಚಿಕೆಯಲ್ಲಿ ಜಗದೀಶ್ ಏಕಾಏಕಿ ಕೂಗಾಡಲು ಆರಂಭಿಸಿದರು. ಸೂಟ್‌ಕೇಸ್ ಪ್ಯಾಕ್ ಮಾಡಿಕೊಂಡು ಹೊರಗೆ ಹೋಗಲು ಮುಂದಾಗಿದ್ದರು.ಇದಲ್ಲದೇ ಜಗದೀಶ್ ಅವರನ್ನು ಸಮಾಧಾನ ಮಾಡಲು ಬಂದಿದ್ದ ಕ್ಯಾಪ್ಟನ್ ಶಿಶಿರ್‌ಹಾಗೂ ಉಗ್ರಂ ಮಂಜು ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಬಳಿಕ ಚೈತ್ರಾ ಕುಂದಾಪುರ ಅವರ ಪರ್ಸನಲ್ ವಿಷ್ಯಕ್ಕೆ ಜಗದೀಶ್ ಕೈಹಾಕಿದರು. ಚೈತ್ರಾ ಕುಂದಾಪುರ ಅವರ ಕೇಸ್‌ಗಳ ಬಗ್ಗೆ ಜಗದೀಶ್ ಕಮೆಂಟ್ ಮಾಡಿದರು. ಇದರಿಂದ ಚೈತ್ರಾ ಕುಂದಾಪುರ ಸಿಡಿದೆದ್ದರು.
ಇದರಿಂದ ಇಬ್ಬರ ಮಧ್ಯೆ ಜಗಳ ತಾರಕಕ್ಕೇ ಏರುತ್ತಲೇ ಹೋಯ್ತು. ಇದೀಗ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಅವರನ್ನೂ ಮನೆಯಿಂದ ಆಚೆಗೆ ಕಳುಹಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇಷ್ಟೇ ಮಾತ್ರವಲ್ಲ ದೊಡ್ಮನೆ ರಣಾಂಗಣ ಆಗಿದೆ. ಲಾಯರ್ ಜಗದೀಶ್ ಮಾತು ಟಾರ್ಚರ್ ಆಗುತ್ತಿವೆ. ಮನೆ ಮಂದಿ ಸಿಟ್ಟಾಗುತ್ತಿದ್ದಾರೆ. ಇದರಿಂದ ಎಲ್ಲರೂ ಜಗಳದ ಮೂಡ್‌ನಲ್ಲಿಯೇ ಇದ್ದಾರೆ. ಆದರೆ, ಇವರ ಜಗಳ ಕಂಟ್ರೋಲ್ ಆಗದೇ ಇದ್ದಾಗ, ಸ್ವತಃ ಬಿಗ್ ಬಾಸ್ ಭಯಂಕರ ಸಿಟ್ಟಾಗಿದ್ದಾರೆ.
ಕ್ಯಾಪ್ಟನ್ ಶಿಶಿರ್ ನಟ ಧರ್ಮ ಕೀರ್ತಿರಾಜರನ್ನ ನಾಮಿನೇಟ್ ಮಾಡಿದ್ದಾರೆ. ಇದನ್ನ ಕೇಳಿದ ಮನೆ ಮಂದಿ ಸುಮ್ಮನೆ ಇದ್ದರು. ಆದರೆ, ಅಲ್ಲಿಯೇ ಇದ್ದ ಜಗದೀಶ್ ಕೇಳಲೇ ಇಲ್ಲ. ನೀವು ಧರ್ಮ ಅವರನ್ನ ಟಾರ್ಗೆಟ್ ಮಾಡಿದ್ದೀರಿ ಅಂತಲೇ ದೂರಿದರು. ನಾಮಿನೇಷನ್ ಅನ್ನ ವಿರೋಧಿಸಿದರು. ಮನೆಯಲ್ಲಿ ನಿಜಕ್ಕೂ ಏನಾಯ್ತು? ಹೊಡೆದಾಟ ಆಗಿದ್ದು ಹೌದಾ? ಜಗದೀಶ್ ಔಟ್ ಆಗಿರೋದು ನಿಜವೇ? ಇವೆಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.