ಪಹಲ್ಗಾಮ್ ಉಗ್ರರ ದಾಳಿಯ ನಂತರ (Pahalgam terror attack) ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಝಿಲ್ಂ ಮತ್ತು ಚಿನಾಬ್ ನದಿ ನೀರನ್ನು ಬಂದ್ ಮಾಡಿರೋ ಹಿನ್ನಲೆ ತನ್ನ ದೇಶದ ರೈತರಿಗೆ ಪಾಕಿಸ್ತಾನ ಸರ್ಕಾರ ಆದೇಶ ನೀಡಿದ್ದು, ಬೆಳೆ ಬೆಳೆಯದಂತೆ ಸೂಚನೆ ನೀಡಿದೆ.

ಈ ಬಾರಿ ಝೀಲಂ ಹಾಗೂ ಚಿನಾಬ್ ನದಿ ನೀರು ನಂಬಿ ಕೃಷಿ ಮಾಡುವ ರೈತರು ಭತ್ತ ಬೆಳೆಯದಂತೆ ಪಾಕಿಸ್ತಾನ (Pakistan) ಸರ್ಕಾರ ಆದೇಶ ಹೊರಡಿಸಿದೆ. ಪಾಕ್ ನ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದ ರೈತರಿಗೆ ಪಾಕ್ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ.

ಹೀಗಾಗಿ ಭಾರತದ ವಾಟರ್ ಸ್ಟೋಕ್ ಗೆ ಪಾಕಿಸ್ತಾನ ಕಕ್ಕಾಬಿಕ್ಕಿಯಾಗಿದ್ದು,ನದಿ ನೀರು ತಡೆ ಹಿಡಿದಿರೋ ಹಿನ್ನಲೆ ಕುಡಿಯೋ ನೀರಿಗೆ ಮತ್ತು ದಿನಬಳಕೆಗೆ ಮೊದಲ ಆದ್ಯತೆ ನೀಡಬೇಕು. ಒಂದುವೇಳೆ ಸರ್ಕಾರದ ಆದೇಶ ಪಾಲಿಸದಿದ್ದರೆ, ಅಂತಹ ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಪಾಕ್ ಸರ್ಕಾರ ಆದೇಶ ಹೊರಡಿಸಿದೆ.