ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ಅನಾಮಿಕನ ದೂರಿನ ಆಧಾರದ ಮೇಲೆ ನಡೆಯುತ್ತಿರುವ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar), ಈ ವಿಚಾರದಲ್ಲಿ ನಾವು ಪರವೂ ಇಲ್ಲ, ವಿರೋಧವೂ ಅಲ್ಲ, ಎಲ್ಲವೂ ನ್ಯಾಯಬದ್ಧವಾಗಿ ನಡೆಯಬೇಕು ಎಂದಿದ್ದಾರೆ.

ನಾನು ಆ ಕ್ಷೇತ್ರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿ ಭಕ್ತಿ ಶ್ರದ್ದೆ ಆಚರಣೆ ಹೇಗೆ ನಡೆಯುತ್ತೆ ಎಂದು ನನಗೆ ತಿಳಿದಿದೆ.ಅಲ್ಲಿ ಷಡ್ಯಂತ್ರ ನಡೆದಿದೆ.. ಅದು ಏನು ಎಂಬುದು ತನಿಖೆಯಿಂದ ಹೊರಗೆ ಬರಲಿದೆ, ಈ ಬಗ್ಗೆ ನಮ್ಮ ಗೃಹ ಸಚಿವರು ಸದನಕ್ಕೆ ಉತ್ತರಿಸಿಲಿದ್ದಾರೆ, ಸತ್ಯವನ್ನು ನಾಡಿನ ಜನತೆಗೆ ಗೃಹ ಸಚಿವರೇ ತಿಳಿಸುತ್ತಾರೆ ಎಂದಿದ್ದಾರೆ.

ಇನ್ನು ನಮ್ಮ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಬದ್ಧತೆ ಇದೆ.ಯಾವುದೇ ಉದ್ದೇಶಗಳಿಗೆ ಸುಳ್ಳು ಹೇಳಿ ಷಡ್ಯಂತ್ರ ನಡೆಸಿ, ಧಾರ್ಮಿಕ ಕ್ಷೇತ್ರದ ಅಪಮಾನ, ಅಪಪ್ರಚಾರ ಮಾಡಬಾರದು. ಈ ಬಗ್ಗೆ ಸಿಎಂ ಕೂಡ ಸೂಚನೆ ನೀಡಿದ್ದಾರೆ.ಒಂದು ವೇಳೆ ಈ ಆರೋಪ ಸುಳ್ಳಾಗಿದ್ರೆ ಕಟ್ಟು ನಿಟ್ಟಿನ ಕ್ರಮವನ್ನು ಸಿಎಂ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ನಮ್ಮ ಸರ್ಕಾರದ ಒಂದು ಚಿಂತನೆ ಇದೆ.ಕಾನೂನನ್ನು ಎಲ್ಲರನ್ನು ಕಾಪಡಬೇಕು,ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಕೋಟ್ಯಂತರ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಮಾಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.











