
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ರೇಪ್ ಕೇಸ್ ವಿಚಾರದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಬೆಂಗಳೂರಲ್ಲಿ ಮಾತನಾಡಿದ್ದಾರೆ. ಸಂತ್ರಸ್ತೆ ದೂರು ಕೊಟ್ಟಿದ್ದಾರೆ, ದೂರಿನ ಮೇಲೆ ಕಾನೂನಿನ ರೀತಿ ಕ್ರಮ ಆಗುತ್ತದೆ. ಅದರ ಬಗ್ಗೆ ಇನ್ನೂ ಡೀಟೈಲ್ಸ್ ತಗೊಳ್ಳಬೇಕು. ಅವರು ಆ ರೀತಿ ಮಾಡಿದ್ದಾರೆ ಅಂದರೆ ಕಾನೂನು ಬಾಹಿರ. ಪಬ್ಲಿಕ್ ಸರ್ವೆಂಟ್ಸ್ ಈ ರೀತಿ ಮಾಡಿದ್ರೆ ಕಾನೂನಿನ ರೀತಿಯಲ್ಲಿ ಕ್ರಮ ಆಗುತ್ತದೆ ಎಂದಿದ್ದಾರೆ. ಇನ್ನು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ವಿಚಾರದಲ್ಲಿ ನಾವು ದ್ವೇಷದ ರಾಜಕಾರಣ ಮಾಡೋದಿಲ್ಲ. ದ್ವೇಷದ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ ಇದೊಂದು ಅಸಹ್ಯಕರ, ಯಾವ ರೀತಿ ಪದ ಬಳಕೆ ಮಾಡಬೇಕೆಂತಲೂ ಗೊತ್ತಿಲ್ಲ. ನಾನು ಯಾವತ್ತಿಗೂ ಒಳ್ಳೆಯದನ್ನು ಬಯಸೋದು. ಕೆಟ್ಟದ್ದನ್ನು ಅಂತೂ ಬಯಸೋದಿಲ್ಲ. ಆದರೆ ನಾವಂತೂ ಯಾರಿಗೂ ಹೆದರುವುದಿಲ್ಲ. ಆ ವ್ಯಕ್ತಿ ಬಗ್ಗೆ ಕೆಟ್ಟದ್ದನ್ನು ಬಯಸಿಲ್ಲ. ಒಳ್ಳೆಯದನ್ನು ಬಯಸಿದ್ದೇನೆ, ಕೆಲಸಕ್ಕೆ ಪ್ರೋತ್ಸಾಹಿಸಿದ್ದೇನೆ. ಬಿಜೆಪಿಯವರು ಮಾಡೋದೆಲ್ಲ ಮಾಡ್ತಾರೆ, ಆಮೇಲೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಾರೆ. ಮುನಿರತ್ನ ಹೇಳಿಕೆ ಬಳಿಕ ಬಿಜೆಪಿಯ ಒಕ್ಕಲಿಗ ನಾಯಕರಿಗೆ ಹಾಲು ಅನ್ನ ತಿಂದಂಗೆ ಆಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಮುನಿರತ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. FSL ವರದಿ ತರಿಸಿಕೊಳ್ಳಲಿ, ವರದಿ ಆಧರಿಸಿ ಕ್ರಮ ಆಗಲಿ. ಆದರೆ ಇದರಲ್ಲಿ ರಾಜಕೀಯ ದ್ವೇಷ ಮಾಡಬೇಡಿ ಎಂದಿದ್ದಾರೆ.