
ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವಾಜ್ ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೇನು ಬಿಜೆಪಿ ಪ್ರೋಗ್ರಾಂ ಎಂದುಕೊಂಡಿದ್ದೀರಾ..? ಈಗ ಇರೋದು ಕಾಂಗ್ರೆಸ್ ಗವರ್ನಮೆಂಟ್. ಬಿಜೆಪಿಯ ಗುಣಗಾನ ಮಾಡೋದನ್ನು ಮುಚ್ಚಬೇಕು ಇಲ್ಲಿ. ಇದೇನು ಬಿಜೆಪಿ ಪ್ರೋಗ್ರಾಂ ಅಂದುಕೊಂಡಿದ್ದೀರಾ..? ಬಾಯಿ ಮುಚ್ಚಿಕೊಂಡು ಇಲ್ಲಿ ಕೂತ್ಕೊಬೇಕು ಅಷ್ಟೇ. ಸ್ಟೇಟ್ನಲ್ಲಿ ಇರೋದು ಸಿದ್ದರಾಮಯ್ಯನ ಸರ್ಕಾರ. ಇಲ್ಲೇನು ನಿಮ್ಮಪ್ಪನ ಸರ್ಕಾರ ಅಲ್ಲ ಇರೋದು ಎಂದಿದ್ದಾರೆ ಶಾಸಕ ಪ್ರದೀಪ್ ಈಶ್ವರ್. ಬಿಜೆಪಿ ಸಂಸದ ಪಿಸಿ ಮೋಹನ್ ಎದುರಲ್ಲೇ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ (congress) ಕಾರ್ಯಕರ್ತರ ಜೊತೆಗೆ ವಾಗ್ವಾದ ಮಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಪಿ.ಸಿ. ಮೋಹನ್ ನಡುವೆ ಮಾತಿನ ಚಕಮಕಿ ನಡೆದಿದೆ. ರಾಜ್ಯ ಸರ್ಕಾರದಿಂದ ಆಯೋಜನೆಯಾಗಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಕಾಲದ ಕೊಡುಗೆಗಳ ಬಗ್ಗೆ ಸಂಸದ ಪಿ.ಸಿ. ಮೋಹನ್ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಪ್ರದೀಪ್ ಈಶ್ವರ್, ಸರ್ಕಾರಿ ಕಾರ್ಯಕ್ರಮದಲ್ಲಿ ಒಂದು ಪಕ್ಷದ ತುತ್ತೂರಿ ಊದುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಮಾತನಾಡಿದ್ದಾರೆ ಸಂಸದ ಪಿ.ಸಿ. ಮೋಹನ್. (BJP MP PC Mohan Attacks Pradeep Eshwar)

ಈ ವೇಳೆ ಮಾತಿಗೆ ಮಾತು ಬೆಳೆದು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಿದ್ದಾರೆ ಶಾಸಕ ಪ್ರದೀಪ್ ಈಶ್ವರ್. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರಿಗೆ ಇಲ್ಲಿ ನಿಮ್ಮಪ್ಪನ ಸರ್ಕಾರ ಅಲ್ಲ, ರಾಜ್ಯದಲ್ಲಿ ಇರೋದು. ಇದು ಸಿದ್ದರಾಮಯ್ಯನ ಸರ್ಕಾರ ಎಂದು ಧಮ್ಕಿ ಹಾಕುವ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು ಶಾಸಕ ಪ್ರದೀಪ್ ಈಶ್ವರ್. ಈ ವೇಳೆ ಮಾತಿನ ಚಕಮಕಿ ನಡೆದಿತ್ತು.
