ಇತ್ತೀಚಿಗೆ ಕೇಂದ್ರ ಸರ್ಕಾರಕ್ಕೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಬಹಿಷ್ಕಾರದ ಬಿಸಿ ತಟ್ಟುತಿದೆ. ಕೆಲ ದಿನಗಳಿಂದ ನೂತನ ಸಂಸತ್ ಭವನದ ಉದ್ಘಾಟನೆಗೆ ದೇಶದ 19 ವಿರೋಧ ಪಕ್ಷಗಳು ಬಹಿಷ್ಕಾರ ಮಾಡುವುದಾಗಿ ಹೇಳಿರುವುದು ಕೇಂದ್ರ ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ. ಇನ್ನು ಈ ಬಹಿಷ್ಕಾರಕ್ಕೆ ಪ್ರಮುಖ ಕಾರಣವಾಗಿ ಕಂಡು ಬಂದಿರೋದು ರಾಷ್ಟ್ರಪತಿ ಅವರನ್ನ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿರೋದು ಅಂತ ಹೇಳಲಾಗುತ್ತಿದೆ

ಇದೀಗ ಮತ್ತೊಂದು ಪ್ರಮುಖ ಬಹಿಷ್ಕಾರವನ್ನ ಕೇಂದ್ರ ಸರ್ಕಾರ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ದೇಶದ ಪ್ರಮುಖ ಅಭಿವೃದ್ಧಿ ಆರ್ಥಿಕ ಬಲಿಷ್ಠತೆಗೆ ಕೆಲವೊಂದು ಚರ್ಚೆಗಳು ನೀತಿ ಆಯೋಗದ ಸಭೆಯಲ್ಲಿ ನಡೆಲಿವೆ ಆದರೆ ಇದೀಗ ಈ ಸಭೆಗೆ ಪಂಜಾಬ್ ಸರ್ಕಾರ ಬಹಿಷ್ಕಾರ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.
ಹೌದು ನಾಳೆ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಪಂಜಾಬ್ ಸರ್ಕಾರ ಬಹಿಷ್ಕರಿಸುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಪತ್ರ ಬರೆದು ಕೇಂದ್ರ ಸರ್ಕಾರ ಪಂಜಾಬ್ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ ಅಂತ ಹೇಳಲಾಗ್ತಾ ಇದೆ. ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಆರ್‌ಡಿಎಫ್, ಹೊಲಗದ್ದೆಗಳು ಮತ್ತು ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಎಂ ಪ್ರಸ್ತಾಪಿಸಿದ್ದರು, ಆದ್ರೆ ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸಿಲ್ಲ ಅಂತ ಬೇಸರವನ್ನ ವ್ಯಕ್ತಪಡಿಸಿದ್ದಾರಂತೆ ಹೀಗಾಗಿ ನಾಳೆ ನಡೆಯಲಿರುವ ನೀತಿ ಆಯೋಗದ ಸಭೆಗೆ ಪಂಜಾಬ್ ಸರ್ಕಾರ ಭಾಗವಹಿಸದೆ ಇರಲು ನಿರ್ಧರಿಸಿದೆ ಅಂತ ಹೇಳಲಾಗುತ್ತಿದೆ.