2023ರ ವಿಧಾನಸಭೆ ಚುನಾವಣೆ(election) ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD kumaraswamy) ಆದಿ ಚುಂಚನಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಯೋಗಿ ಆದಿತ್ಯನಾಥ್ ಮಂಡ್ಯ ಭೇಟಿ ವಿಚಾರವಾಗಿ ಮಾತ್ನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯಗೆ ಬಂದು ಯೋಗಿ ಆದಿತ್ಯನಾಥ್(yogi adithyanath) ಏನ್ ಹೇಳಿದ್ರು? ಬುಲ್ಡೋಜರ್ ಮಾಡ್ತೀನಿ ಎಂದು ಹೇಳಿ ಹೋದ್ರಾ? ಬುಲ್ಡೋಜರ್ ತಂದು ಮಂಡ್ಯದಲ್ಲಿ ಕಟ್ಟಡಗಳನ್ನು ಕೆಲವು ಸ್ಥಳಗಳನ್ನು ಕೆಡುವುತ್ತೀನಿ ಅಂದ್ರಾ? ನಮಗೆ ಕರ್ನಾಟಕ ಕರ್ನಾಟಕ ಮಾಡೆಲ್ ಸಾಕು ಯುಪಿ ಮಾಡೆಲ್ ಬೇಡ. ದೇಶಕ್ಕೆ ಕರ್ನಾಟಕವೇ ಮಾಡಲ್ ಆಗಿದೆ. ಕರ್ನಾಟಕ ಮಾಡೆಲ್ ಮುಂದೆ ಯಾವುದು ಇಲ್ಲ. ಯುಪಿ ಮಾಡಲ್ ಬೇಕು ಅಂದ್ರೆ ಅಂತವರು ಅಲ್ಲೇ ಹೋಗುವುದು ಉತ್ತಮ. ಯೋಗಿ ಆದಿತ್ಯನಾಥ್ ಬರುವುದರಿಂದ ಒಕ್ಕಲಿಗ ಮತಗಳನ್ನು ಸೆಳೆಯ ಬಹುದು ಎಂದು ಅವರ ಆಸೆ. ನಾಥ ಪರಂಪರೆ ಇಟ್ಟುಕೊಂಡು ಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆ. ನಾಥ ಪರಂಪರೆಯ ರಾಜಕೀಯ(politics) ಚುಂಚನಗಿರಿಯ ಕ್ಷೇತ್ರಕ್ಕೆ ಮಾತ್ರ ಸೀಮಿತ.
ಬೇರೆ ಅವರಿಗೆ ನಾಥ ಪರಂಪರೆಯ ರಾಜಕೀಯ ಆಗಲ್ಲ, ಚುಂಚನಗಿರಿಗೆ ಮಾತ್ರ ಸೀಮಿತ. ಇಲ್ಲಿ ನಮ್ಮ ಸಂಸ್ಕೃತಿ ನಾಥ ಪರಂಪರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ಸ್ವಾಮೀಜಿ ಬುಲ್ಡೋಜರ್ ಮಾಡುವ ಸಂಸ್ಕೃತಿಯಲ್ಲಿ ಬಂದಿಲ್ಲ. ಸರ್ವೇಜನೋ ಸುಖಿನೋ ಬವಂತು ಎಂದು ನಮ್ಮ ಸ್ವಾಮೀಜಿಗಳು ಹೇಳ್ತಾರೆ, ಇದು ನಾಥ ಪರಂಪರೆ. ಆ ನಾಥ ಪರಂಪರೆ ಯಾರನ್ನು ಬೇಕಾದ್ರು ಏನು ಮಾಡು, ಬುಲ್ಡೇಜರ್ ಮಾಡು, ಫೇಕ್ ಎನ್‌ಕೌಂಟರ್ ಮಾಡಿಸು ಎನ್ನುವುದು ಅಲ್ಲಿಯದ್ದು. ನಮ್ಮಲ್ಲಿ ಆ ಪರಂಪರೆ ಇಲ್ಲ, ನಮಗೆ ಈ ಪರಂಪರೆ ಬೇಕು ಅಂತ ಹೆಚ್.ಡಿ.ಕುಮಾಸ್ವಾಮಿ(HD kumaraswamy) ಹೇಳಿಕೆ ನೀಡಿದ್ರು.
ಇದೇ ವೇಳೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳುವ ವಿಚಾರವಾಗಿ ಮಾತ್ನಾಡಿದ ಹೆಚ್‌ಡಿಕೆ, (HDK) ಅಂಬೇಡ್ಕರ್ ಅವರು ಜೀವನದಲ್ಲಿ ಪಟ್ಟ ನೋವು ನಲಿವುಗಳ ಮೇಲೆ ದೇಶದಲ್ಲಿ ಸಮಾನತೆ ದೊರೆಯಬೇಕೆಂದು ಸಂವಿಧಾನ ರಚನೆಯಾಗಿದೆ. ಪ್ರಪಂಚದಲ್ಲಿಯೇ ಅದ್ಭುತ ಸಂವಿಧಾನ ನಮ್ಮದು. ಅವರು ನೀಡಿರುವ ಹಕ್ಕನ್ನು ರಾಷ್ಟ್ರೀಯ ಪಕ್ಷಗಳು ಜನರಿಗೆ ನೀಡಿದೆ ಎನ್ನುವುದು ಮುಖ್ಯ. ಯಾರು ಏನು ಮಾತನಾಡಿದರು ಎಂಬುದು ಮುಖ್ಯವಲ್ಲ. ಅವರ ಸಂದೇಶಗಳನ್ನು ಅನುಷ್ಠಾನ ಮಾಡಿದ್ದಾರೆ ಎಂದು ಚರ್ಚೆ ಮಾಡೋಣಾ. ವಿಷಯ ತಿರುಚುವುದರ ಬಗ್ಗೆ ಚರ್ಚೆ ಬೇಡ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.