
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಕರ್ನಾಟಕ ಸರ್ಕಾರಕ್ಕೆ ಕಟ್ಟೆಚ್ಚರ ನೀಡಿದ್ದಾರೆ. ಸೋನಿಯಾ ಗಾಂಧಿ(Soniya Gandhi), ರಾಹುಲ್ ಗಾಂಧಿ(Rahul Gandhi) ಮೇಲೆ ಇಡೀ ದಾಳಿ ಮಾಡಿ ಚಾರ್ಜ್ ಶಿಟ್ ಹಾಕಿದ್ರೆ, ಅವರನ್ನು ಹೆದರಿಸಿದ್ರೆ, ಸುಮ್ಮನಾಗ್ತಾರೆ ಅಂತ ಅಂದುಕೊಂಡಿದ್ದೀರಾ..? ಅಂದ್ರೆ ಕಾಂಗ್ರೆಸ್ ಪಕ್ಷ ಯಾವುದಕ್ಕೂ ಹೆದರಲ್ಲ. ನೀವು ಎಷ್ಟೇ ದಾಳಿ ಮಾಡಿದ್ರು ನಾವು ಹೆದರಲ್ಲ ಎಂದಿರುವ ಖರ್ಗೆ, ಎಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದೆಯೋ, ಆಲ್ಲಿ ಅಧಿಕಾರದಿಂದ ಕೆಳಗಿಳಿಸಲು ಪ್ಲಾನ್ ಮಾಡ್ತಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಏರಲು ಸಂಚು ಮಾಡ್ತಾ ಇದ್ದಾರೆ. ನಿಮ್ಮ ನಿಮ್ಮ ನಡುವೆ ಏನೇ ಭೇದ-ಭಾವ ಇದ್ದರೂ ಅದನ್ನು ನಿಮ್ಮ ಹತ್ರವೇ ಇಟ್ಟುಕೊಳ್ಳಿ, ಅವರ ಕುತಂತ್ರ, ದುಡ್ಡಿಗೆ ಬಲಿ ಆಗಬೇಡಿ ಎಂದು ಎಚ್ಚರಿಸಿದ್ದಾರೆ.
ನಮ್ಮ ಭಾಗದಲ್ಲಿ ಮೋದಿಯಂತು ಒಳ್ಳೆ ಕೆಲಸ ಮಾಡಲ್ಲ.. ಮಾಡೋದು ಇಲ್ಲ. ಈ ಭಾಗದಲ್ಲಿ ನಾನು ರೈಲ್ವೆ ಬೋಗಿ ತಯಾರಿಕ ಘಟಕ ಸ್ಥಾಪನೆ ಮಾಡಿದ್ವಿ. ಆದರೆ ಮೋದಿ ಸರ್ಕಾರ ರೈಲ್ವೆ ಕೋಚ್ ಫ್ಯಾಕ್ಟರಿಯನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ನಾನು ಒಂದು ವರ್ಷದಲ್ಲಿ ಮಾಡಿದ ಕೆಲಸಗಳನ್ನ ಅವರು 10 ವರ್ಷದಲ್ಲಿ ಮಾಡಿಲ್ಲ. ಇವರಿಗೆ ಒಂದು ಟ್ರೈನ್ ಬಿಡು ಅಂದ್ರೆ ಹತ್ತಾರು ಸಲ ತಿರುಗಬೇಕು. ಉದ್ಯೋಗ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

ಕಲಬುರಗಿಯಲ್ಲಿ ಏರ್‌ಪೋರ್ಟ್ ಸ್ಥಾಪನೆ ಮಾಡಿ ಕೇಂದ್ರಕ್ಕೆ ಒಪ್ಪಿಸಿದ್ವಿ. ಆದರೆ ಕಲಬುರಗಿ ಏರ್‌ಪೋರ್ಟ್‌ಗೆ ಸರಿಯಾಗಿ ಒಂದು ಫ್ಲೈಟ್ ಬರ್ತಿಲ್ಲ. ಕೇಂದ್ರ ಸರ್ಕಾರ ಒಂದು ಮಾಡುತ್ತೆ.. ಯಾರು ಮಾತಾಡ್ತಾರೆ.. ಅಂಥವರನ್ನ ಇ.ಡಿ, ಐಟಿ ಬಲೆಗೆ ಹೇಗೆ ಬಿಳಿಸಬೇಕು ಅಂತಾ ಯೋಚಿಸುತ್ತದೆ. ನ್ಯಾಷನಲ್ ಹೆರಾಲ್ಡ್ ಹಗರಣ ಅಂತಾ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ದೇಶಕ್ಕಾಗಿ ಮಾಡಿದ ಸಂಸ್ಥೆ ಮೇಲೆ ಇಡಿ ಮೂಲಕ ಚಾರ್ಜ್‌ಶಿಟ್ ಸಲ್ಲಿಕೆ ಮಾಡಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್‌ಶಿಟ್ ಹಾಕಿದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀವೇನಾದರೂ ಚಂದ ಕೊಟ್ಟಿದ್ದೀರಾ..? ಎಂದು ಪ್ರಶ್ನಿಸಿರುವ ಮಲ್ಲಿಕಾರ್ಜುನ ಖರ್ಗೆ, ನಮ್ಮದು ದೇಶ ಕಟ್ಟುವ ಸಲುವಾಗಿ ಪತ್ರಿಕೆ ಆರಂಭ ಮಾಡಿದ್ದಾರೆ. ಆದ್ರೆ ನಿಮ್ಮ ಪತ್ರಿಕೆ ದೇಶ ಒಡೆಯುವ ಕೆಲಸ ಮಾಡ್ತಾ ಇದೆ. ಮುಸ್ಲಿಂ ವಕ್ಫ್ ಬೋರ್ಡ್ ಮುಸ್ಲಿಮರ ಸರದಿ ಆಯ್ತು. ಇದೀಗ ಹೆಚ್ಚಿನ ಜಮೀನು ಇರೋದು ಕ್ರಿಶ್ಚಿಯನ್ ಸಮಾಜದಲ್ಲಿ, ಕೇಂದ್ರದ ಕಣ್ಣು ಇದೀಗ ಕ್ರಿಶ್ಚಿಯನ್ ಸಮಾಜದ ಮೇಲೆ ಬೀಳಲಿದೆ. ದೇಶದ ಜನರನ್ನು ಒಂದು ಮಾಡಲ್ಲ ಆದ್ರೆ ಅವರನ್ನು ಒಡೆಯುವ ಕೆಲಸ ಮಾಡ್ತಾ ಇದೆ. ಮತ್ತೊಮ್ಮೆ ದೇಶ ಕಟ್ಟುತ್ತೇವೆ, ಮೋದಿ ಶಾ ಈ ಬಿಜೆಪಿಯನ್ನ ಒದ್ದು ಓಡಿಸುತ್ತೇವೆ ಎಂದು ಬಿಜೆಪಿ ಮೋದಿ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.