ಶಾಲೆಗಳಿಗೆ ಮಕ್ಕಳ ಅಡ್ಮಿಷನ್ ಮಾಡಲು ಇದ್ದ ಸಮಸ್ಯೆಯನ್ನು ಸರ್ಕಾರ ಬಗವೆಹರಿಸಿದೆ. ವಯೋಮಿತಿ ವಿಚಾರದಲ್ಲಿ ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಶಿಕ್ಷಣ ಇಲಾಖೆ, ವಯೋಮಿತಿ ಸಡಿಲಗೊಳಿಸಿ ಆದೇಶ ಮಾಡಿದೆ. ಎಸ್ಇಪಿ ವರದಿ ಆಧಾರದ ಮೇಲೆ 6 ವರ್ಷ ವಯೋಮಿತಿ ಸಡಿಲಿಸಿ ಶಿಕ್ಷಣ ಇಲಾಖೆ ಆದೇಶ ಮಾಡಿದೆ.

ಮಕ್ಕಳನ್ನು 1ನೇ ತರಗತಿ ಸೇರ್ಪಡೆ ಮಾಡಲು ಈ ಹಿಂದಿನ ನಿಯಮ ಪಾಲನೆ ಮಾಡುವಂತೆ ಶಿಕ್ದಣ ಇಲಾಖೆ ಆದೇಶ ಮಾಡಿದ್ದು, 5 ವರ್ಷ 6 ತಿಂಗಳು ಆಗಿರುವ ಮಕ್ಕಳನ್ನು ಈ ವರ್ಷ 1ನೇ ತರಗತಿ ನೋಂದಣಿ ಮಾಡಲು ಅವಕಾಶ ಕೊಡಲಾಗಿದೆ. ಅದೇ ರೀತಿ LKG ಅಡ್ಮಿಶನ್ಗೆ 4 ವರ್ಷ ವಯೋಮಿತಿ ನಿಗದಿ ಮಾಡಿದೆ.

ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ವಯೋಮಿತಿ ಸಡಿಲಗೊಳಿಸಿದ್ರಿಂದ ಸುಮಾರು ಐದು ಲಕ್ಷ ಮಕ್ಕಳಿಗೆ ಪ್ರಯೋಜನಕಾರಿ ಆಗಿದೆ. ಎಸ್ಇಪಿ ವರದಿ ಆಧಾರದಲ್ಲಿ 6 ವರ್ಷದ ಮಿತಿ ಸಡಿಲಿಕೆ ಮಾಡಿದ್ದೇವೆ. 1ನೇ ತರಗತಿ ಸೇರ್ಪಡೆಗೆ ಈ ಹಿಂದೆ ಇದ್ದ ನಿಯಮ ಪಾಲನೆ ಮಾಡಲಾಗುವುದು ಎಂದಿದ್ದಾರೆ.

5 ವರ್ಷ 5 ತಿಂಗಳ ಮಕ್ಕಳಿಗೆ 1ನೇ ತರಗತಿ ಸೇರ್ಪಡೆಗೆ ಅವಕಾಶ ಕೊಡಲಾಗಿದೆ. ಈ ವರ್ಷ ಮಾತ್ರ 5 ವರ್ಷ 5 ತಿಂಗಳು ಅಗತ್ಯ. ಆದರೆ ಮಗು ಯುಕೆಜಿ ಓದಿರಬೇಕು. ಮುಂದಿನ ವರ್ಷಕ್ಕೆ ಇದು ಅನ್ವಯ ಆಗೋದಿಲ್ಲ. ಒಂದನೇ ಕ್ಲಾಸ್ ಸೇರಿರಬೇಕು ಅಂದ್ರೆ 5.5 ವರ್ಷ ಆಗಿರಲೇಬೇಕು. ಮಗು ಸರ್ಕಾರಿ ಶಾಲೆಯಲ್ಲಿ ಓದಿದ್ರೆ ಅಂಗನವಾಡಿ ಮುಗಿಸಿರಬೇಕು. ಖಾಸಗಿ ಶಾಲೆ ಆದ್ರೆ ಎಲ್ಕೆಜಿ, ಯುಕೆಜಿ ಇಲ್ಲವೇ ಬಾಲವಾಡಿ ಆಗಿರಲೇಬೇಕು ಎಂದಿದ್ದಾರೆ.