
ಪಿರಿಯಾಪಟ್ಟಣ: ತಾಲೂಕಿನ ಕಕ್ಕುಂಡಿ ಗ್ರಾಮದಲ್ಲಿ ಶುಕ್ರವಾರ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಕುಸಿದು ಬೀಳುತ್ತಿದ್ದ ವೇಳೆ ಎರಡು ವರ್ಷದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿ ಮೃತಪಟ್ಟರು. ತಾಲ್ಲೂಕು ಕಚೇರಿ ಗ್ರಾಮ ಸೇವಕ ಶಿವರಾಜು ಅವರ ಪತ್ನಿ ಹೇಮಲತಾ(22) ಮೃತರು.ಅವರು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೋಗಿ ಬರುವಾಗ ಗೋಡೆ ಕುಸಿಯುತ್ತಿರುವುದನ್ನು ಗಮನಿಸಿದ್ದಾರೆ. ಆಗ, ಜತೆಗಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಇದರಿಂದ ಮಗು (ಕೃಷಾಂತ್) ಪ್ರಾಣಾಪಾಯದಿಂದ ಪಾರಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.









