
ತೆಲಂಗಾಣ: ನ್ಯಾಯಾಂಗ ಬಂಧನಲ್ಲಿರುವ ರೈತನ ಕೈಗೆ ಕಬ್ಬಿಣದ ಚೈನ್(ಕೋಳ) ಹಾಕಿ(Handcuffs) ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಪೊಲೀಸರ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಸಂಗಾರೆಡ್ಡಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವೀರಯ್ಯ ನಾಯಕ್ ಎಂಬ ರೈತನಿಗೆ ಎದೆನೋವು ಕಾಣಿಸಿಕೊಂಡಿದೆ.ಈ ಹಿನ್ನೆಲೆ ವೈದ್ಯಕೀಯ ಚಿಕಿತ್ಸೆಗಾಗಿ ಕೈಕೋಳದಲ್ಲಿ ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಳೆದ ತಿಂಗಳು ಲಗಚರ್ಲದಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಮೇಲೆ ನಡೆದ ದಾಳಿಯಲ್ಲಿ ನಾಯಕ್ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಇತನ್ನು ಬಂಧನ ಮಾಡಲಾಗಿತ್ತು.
https://twitter.com/SbnSodanap65364/status/1867178682084962706?t=KtnZgz4JnD7Dd8nuMhq8jg&s=19
ಕೈಕೋಳ ಹಾಕಿ ರೈತನನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಮತ್ತು ಕೆಲ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ ರೈತನು ಕೊಲೆ ಕೇಸ್ನಲ್ಲಿ ಬಂಧನವಾಗಿಲ್ಲ. ಗಲಾಟೆ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ ಅಷ್ಟೇ. ಚಿಕಿತ್ಸೆಗೆ ಈ ತರ ಅವರನ್ನು ಕರೆದುಕೊಂಡುವುದು ಎಷ್ಟು ಸರಿ ಎಂದು ರಾಜ್ಯದ ಜನರು ಗರಂ ಆಗಿದ್ದಾರೆ’.